ಸೋಮವಾರಪೇಟೆ,ಮಾ.೧೮: ಪಟ್ಟಣ ವ್ಯಾಪ್ತಿಯಲ್ಲಿರುವ ವಸತಿ ರಹಿತರಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಪಟ್ಟಣ ಪಂಚಾಯಿತಿ ವತಿಯಿಂದ ಸಮೀಕ್ಷೆ ನಡೆಸಲು ತೀರ್ಮಾನಿಸಿದ್ದು, ಸರ್ಕಾರೇತರ ಸಂಸ್ಥೆಯ ಮೂಲಕ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ.

ರಾಷ್ಟಿçÃಯ ನಗರ ಜೀವನೋಪಾಯ ಅಭಿಯಾನ ಯೋಜನೆಯ ನಗರ ವಸತಿ ರಹಿತರಿಗೆ ಆಶ್ರಯ ಉಪಘಟಕದಡಿ ಆಶ್ರಯ ಕಲ್ಪಿಸಲು ಎನ್.ಜಿ.ಓ. ಮುಖಾಂತರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ವಸತಿ ರಹಿತರ ( ನಗರದಲ್ಲಿ ರಾತ್ರಿ ವೇಳೆ ತಂಗುವ ನಿರ್ಗತಿಕರು, ರಸ್ತೆ ಬದಿ ಅಂಗಡಿಗಳ ಜಗುಲಿ/ ರೇಲ್ವೇ ನಿಲ್ದಾಣ / ಬಸ್ ನಿಲ್ದಾಣ /ಸಾರ್ವಜನಿಕ ಸ್ಥಳಗಳಲ್ಲಿ ಮಲಗುವ ಮಾನಸಿಕ ಅಸ್ವಸ್ಥರು, ವೃದ್ದರು, ಮಕ್ಕಳು ಅಂಗವಿಕಲರು ಮತ್ತು ಇನ್ನಿತರ ವಸತಿ ರಹಿತರು, ಅನಾಥರುಗಳು) ಸಮೀಕ್ಷೆಯನ್ನು ತುರ್ತಾಗಿ ಮಾಡಬೇಕಾಗಿರುವುದರಿಂದ ದರ್ಪಣ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿರುವAತಹ ಸರ್ಕಾರೇತರ ಸಂಸ್ಥೆಯವರು ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಡೇ-ನಲ್ಮ್ ಶಾಖೆಯನ್ನು ಸಂಪರ್ಕಿಸುವAತೆ ಮನವಿ ಮಾಡಿದ್ದಾರೆ.