ಗುಡ್ಡೆಹೊಸೂರು, ಮಾ. ೧೮: ಇಲ್ಲಿಗೆ ಸಮೀಪದ ತ್ಯಾಗತ್ತೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಮಹಾ ಪೂಜೆ ತಾ. ೨೪ ರಿಂದ ೨೭ ರವರೆಗೆ ನಡೆಯಲಿದೆ. ತಾ. ೨೪ ರಂದು ಸಂಜೆ ತಕ್ಕರ ಮನೆಯಿಂದ ಭಂಡಾರ ಇಳಿಸುವುದು. ನಂತರ ಶ್ರೀದೇವಿ ಬಲಿ, ತಾ. ೨೫ ರಂದು ಮಧ್ಯಾಹ್ನ ೩ ಗಂಟೆಯಿAದ ಪಟ್ಟಣಿ, ಎತ್ತುಹೇರು, ಶ್ರೀದೇವಿ ಬಲಿ, ಅಲಂಕಾರ ಪೂಜೆ ನಡೆಯಲಿದೆ. ತಾ. ೨೬ ರಂದು ಬೆಳಿಗ್ಗೆ ೧೦.೩೦ ಗಂಟೆಯಿAದ ತುಲಾಭಾರ ಸೇವೆಗಳು, ೧೨ ಗಂಟೆಗೆ ಮಹಾಪೂಜೆ, ಮಧ್ಯಾಹ್ನ ೩ ಗಂಟೆಯಿAದ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಶ್ರೀದೇವಿ ಅವಭೃತ ಸ್ನಾನ, ಶ್ರೀದೇವಿ ಬಲಿ ನೃತ್ಯ ನಡೆಯಲಿದೆ. ತಾ. ೨೭ ರಂದು ಬೆಳಿಗ್ಗೆ ೯ ಗಂಟೆಯಿAದ ಶುದ್ಧ ಕಲಶ, ಮಹಾಪೂಜೆ ನಡೆಯಲಿದೆ. ಸದರಿ ದಿನಗಳಲ್ಲಿ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.