ಮಡಿಕೇರಿ, ಮಾ. ೧೮: ಮೂರ್ನಾಡಿನ ಪ್ರಥಮದರ್ಜೆ ಕಾಲೇಜಿನ ದೈಹಿಕ ನಿರ್ದೇಶಕರಾಗಿರುವ ಕಂಬಿರAಡ ಬೋಪಣ್ಣ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳೆಯರ ಹಾಕಿ ತಂಡದ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ರಾಜಸ್ಥಾನದ ಉದಯಪುರದ ಮೋಹನ್ಲಾಲ್ ಸುಖದ್ಯ ವಿಶ್ವವಿದ್ಯಾನಿಲಯದಲ್ಲಿ ಮಾರ್ಚ್ ೨೧ ರಿಂದ ಮಾರ್ಚ್ ೨೭ ರವರೆಗೆ ನಡೆಯಲಿರುವ ಭಾರತದ ಅಂತರ ವಿಶ್ವವಿದ್ಯಾನಿಲಯದ ಮಹಿಳೆಯರ ಹಾಕಿ ಪಂದ್ಯಾಟಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ತಂಡವನ್ನು ತರಬೇತುಗೊಳಿಸಿ ಕೊಂಡೊಯ್ಯುವ ಜವಾಬ್ದಾರಿಯನ್ನು ಇವರು ನಿರ್ವಹಿಸಲಿದ್ದಾರೆ. ಈಗಾಗಲೇ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಮಾರ್ಚ್ ೮ ರಿಂದ ಮಾರ್ಚ್ ೧೬ ರವರೆಗೆ ತಂಡವನ್ನು ತರಬೇತುಗೊಳಿಸಿದ್ದಾರೆ ಎಂದು ಮೂರ್ನಾಡು ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಟ್ಟಡ ಪೂವಣ್ಣ ಅವರು ತಿಳಿಸಿದ್ದಾರೆ.