ಕಳೆದ ಸಾಲಿಗಿಂತ ಅಧಿಕ ಮೊತ್ತಕ್ಕೆ ಹರಾಜು

ಸುಂಟಿಕೊಪ್ಪ, ಮಾ. ೧೮: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಕೋಳಿ, ಹಸಿಮೀನು, ಕುರಿಮಾಂಸ, ಹಂದಿಮಾAಸ ಹಾಗೂ ಸಂತೆ ಸುಂಕ ಎತ್ತುವಳಿಯಿಂದ ೨೦೨೨-೨೩ನೇ ಸಾಲಿನಲ್ಲಿ ಕಳೆದ ಸಾಲಿಗಿಂತ ಅಧಿಕ ಮೊತ್ತಕ್ಕೆ ಹರಾಜಾಗಿದೆ. ಕೋಳಿ ಮಾಂಸದ ೧೦ ಅಂಗಡಿ ಮಳಿಗೆಗಳ ೨೦೨೧-೨೦೨೨ನೇ ಸಾಲಿನಲ್ಲಿ ರೂ. ೧೩,೪೫,೭೦೦ಕ್ಕೆ ಹರಾಜಾಗಿದ್ದರೆ, ಈ ವರ್ಷ ರೂ. ೧೫,೧೬,೭೦೦ಗೆ ಹರಾಜಾಗಿದೆ.

ಹಸಿಮೀನು ಮಳಿಗೆಗಳು ೪ ಅಂಗಡಿಗಳಲ್ಲಿ ಕಳೆದ ವರ್ಷ ರೂ. ೪,೨೧,೦೦೦ಗೆ ಹರಾಜಾಗಿದ್ದರೆ, ಈ ಸಾಲಿನಲ್ಲಿ ರೂ. ೯,೩೨,೦೦೧ಕ್ಕೆ ಹರಾಜಾಗಿದೆ. ಕುರಿ ಮಾಂಸ ಮಳಿಗೆಯ ೫ ಅಂಗಡಿಗಳು ಕಳೆದ ಸಾಲಿನಲ್ಲಿ ರೂ. ೨,೦೨,೨೦೦ಗೆ ಹರಾಜಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ ರೂ. ೨,೫೧,೨೦೦ಗೆ ಹರಾಜಾಗಿದೆ. ಹಂದಿ ಮಾಂಸದ ೨ ಮಳಿಗೆಗಳು ಕಳೆದ ವರ್ಷ ರೂ. ೪,೩೩,೭೭೭ಗೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. ೩,೦೦,೩೦೦ಗೆ ಹರಾಜಾಗಿದೆ. ಸಂತೆ ಸುಂಕ ಎತ್ತುವಳಿ ಕಳೆದ ಸಾಲಿನಲ್ಲಿ ರೂ. ೫,೨೭,೦೦೦ಗೆ ಹರಾಜಾಗಿದ್ದು, ಪ್ರಸಕ್ತ ಸಾಲಿನಲ್ಲಿ ರೂ. ೧೦,೦೧,೫೦೦ಗೆ ಹರಾಜಾಗಿದೆ.