ನಾಪೋಕ್ಲು, ಮಾ. ೧೮: ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅನುದಾನದಲ್ಲಿ ಅಡಿಯಾರ ಕಾಲೋನಿಯಲ್ಲಿ ನಿರ್ಮಿಸಲಾಗುತ್ತಿರುವ ರೂ. ೫ ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ಮಡಿಕೇರಿ ತಾಲೂಕು ಬಿ.ಜೆ.ಪಿ. ಕೃಷಿ ಮೋರ್ಚಾದ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ಮಡಿಕೇರಿ ತಾಲೂಕು ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ಶಿವಚಾಳಿಯಂಡ ಕಿಶೋರ್, ಬೊಪ್ಪಂಡ ಕವನ್ ಕಾಳಪ್ಪ, ಅಡಿಯಾರ ಚಾಣೆ, ಉಮೇಶ್ ಮತ್ತಿತರರು ಇದ್ದರು.