ಮಡಿಕೇರಿ, ಮಾ. ೧೮: ಕೊಡಗು ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿರುವ ಬಂಟ ಸಮುದಾಯ ಬಾಂಧವರ ಕ್ರಿಕೆಟ್ ಪಂದ್ಯಾವಳಿಗೆ ಇಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಚಾಲನೆ ದೊರಕಿತು. ೮ ತಂಡಗಳನ್ನೊಳಗೊಂಡ ೩ ದಿನಗಳ ಕಾಲ ನಡೆಯುವ ಕ್ರಿಕೆಟ್ ಟರ‍್ನಿಗೆ ಉದ್ಯಮಿ ಜಗದೀಶ್ ರೈ ಅವರು ಚಾಲನೆ ನೀಡಿದರು. ಸಮುದಾಯ ಬಾಂಧವರ ಎಲ್ಲಾ ರೀತಿಯ ಕರ‍್ಯಕ್ರಮಗಳಿಗೆ ಮುಂದಿನ ದಿನಗಳಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿ ಪಂದ್ಯಾವಳಿಗೆ ಶುಭ ಹಾರೈಸಿದರು.
ಸಭಾ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ್ ರೈ ಅವರು ಮಾತನಾಡಿ ಪಂದ್ಯಾವಳಿಯನ್ನು ಆಟಗಾರರು ಸಹನೆ, ತಾಳ್ಮೆಯಿಂದ ಆಡುವ ಮೂಲಕ ಒಂದೇ ಕುಟುಂಬದವರು ಆಡುತ್ತಿರುವ ರೀತಿಯ ಮನೋಭಾವ ಬೆಳೆಸಬೇಕೆಂದರು.
ಸಭೆಯಲ್ಲಿ ಸಮುದಾಯದ ಹಿರಿಯರಾದ ಕೊರಗಪ್ಪ ರೈ, ಮಡಿಕೇರಿ ನಗರ ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಶೆಟ್ಟಿ, ನಗರಸಭಾ ಸದಸ್ಯ ಅರುಣ್ ಶೆಟ್ಟಿ, ಉದ್ಯಮಿ ಅಶ್ವಿನಿ ಪುರುಷೋತ್ತಮ್ ರೈ, ಪತ್ರರ‍್ತೆ ಸವಿತಾ ರೈ, ಕಾಫಿ ಬೆಳೆಗಾರ ದಯಾನಂದ ರೈ ಉಪಸ್ಥಿತರಿದ್ದು ಪಂದ್ಯಾವಳಿಗೆ ಶುಭ ಹಾರೈಸಿದರು. ರ‍್ಷಿತಾ ಶೆಟ್ಟಿ ಅವರು ಪ್ರರ‍್ಥನೆ ನೆರವೇರಿಸಿದರು. ಕರ‍್ಯ ಕ್ರಮವನ್ನು ಪತ್ರರ‍್ತ ಕಿಶೋರ್ ರೈ ನಿರೂಪಿಸಿದರು.(ಮೊದಲ ಪುಟದಿಂದ) ಕೊಡಗು ಪ್ರೆಸ್ ಕ್ಲಬ್ ತಂಡ ಹಾಗೂ ಯುವ ಬಂಟ್ಸ್ ಅಸೋಸಿಯೇಷನ್ ನಡುವೆ ಉದ್ಘಾಟನಾ ಪಂದ್ಯ ನಡೆದಿದ್ದು ಯುವ ಬಂಟ್ಸ್ ತಂಡ ಜಯ ಸಾಧಿಸಿತು. ಉಳಿದಂತೆ ೩ ದಿನಗಳ ಕಾಲ ಒಟ್ಟು ೪೭ ಪಂದ್ಯಗಳು ನೆರವೇರಲಿದ್ದು, ಭಾನುವಾರ ಫೈನಲ್ ಪಂದ್ಯ ನಡೆಯಲಿದೆ. ತಾ.೧೯ ಹಾಗೂ ತಾ.೨೦ ರಂದು ಕ್ರಿಕೆಟ್‌ನೊಂದಿಗೆ ಸಮುದಾಯದ ಮಹಿಳೆಯರು ಹಾಗೂ ಮಕ್ಕಳಿಗೆ ‘ಟಗ್ ಆಫ್ ವಾರ್’, ‘ಮ್ಯೂಸಿಕಲ್ ಚೇರ್’ ಇತರ ಆಟೋಟ ಸ್ಪರ್ಧೆಗಳು ನಡೆಯಲಿವೆ.
ಬಂಟ್ಸ್ ಹಂರ‍್ಸ್, ಭಗವತಿ ಬಂಟ್ಸ್ ಮುನ್ನಡೆ
ಪಂದ್ಯಾವಳಿಯ ಮೊದಲ ದಿನ ಆಡಿದ ಮೂರು ಪಂದ್ಯಗಳನ್ನು ಗೆದ್ದಿರುವ ಭಗವತಿ ಬಂಟ್ಸ್ ಹಾಗೂ ಬಂಟ್ಸ್ ಹಂರ‍್ಸ್ ಐಗೂರು ತಂಡ ತಲಾ ೬ ಅಂಕಗಳೊAದಿಗೆ ಮುನ್ನಡೆ ಪಡೆದಿವೆ. ಬಂಟ್ಸ್ ಅವೆಂರ‍್ಸ್ ೪ ಅಂಕಣ ಗಳೊಂದಿಗೆ ತೃತೀಯ, ಎರಡು ಅಂಕ ಪಡೆದಿರುವ ಕೈಕೇರಿ ನಾಲ್ಕನೇ ಸ್ಥಾನದಲ್ಲಿದೆ.ಬಂಟ್ಸ್ ಚಾಂಪಿಯನ್ಸ್ ಲೀಗ್ ಕ್ರಿಕೆಟ್‌ಗೆ ಚಾಲನೆ