ಪೊನ್ನಂಪೇಟೆ, ಮಾ. ೧೮: ಜೆ.ಸಿ.ಐ. ಭಾರತವು ಕಳೆದ ವರ್ಷ ಪರಿಚಯಿಸಿದ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್ (ಎಸ್.ಎಂ.ಎ.) ವಿಭಾಗವು ಜೇಸೀಸ್ ಮಹಾಸಂಸ್ಥೆಯ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಅಲ್ಲದೆ ಎಸ್.ಎಂ.ಎ.ಗೆ ವಲಯದಾದ್ಯಂತ ವ್ಯಾಪಕ ಸ್ಪಂದನ ದೊರೆಯುತ್ತಿದೆ ಎಂದು ಎಸ್.ಎಂ.ಎ. ವಿಭಾಗದ ವಲಯ ೧೪ರ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್. ಕುಮಾರ್ ಅವರು ಹೇಳಿದರು.
ಈ ಕುರಿತು ಗೋಣಿಕೊಪ್ಪಲಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡಿಮೆ ಅವಧಿಯಲ್ಲೇ ಎಸ್. ಎಂ.ಎ. ಗಮನಾರ್ಹವಾದ ಬೆಳವಣಿಗೆಯನ್ನು ಕಂಡಿದೆ. ಜೆಸಿಐ ಭಾರತದ ಆಡಳಿತ ನಿರ್ವಹಣಾ ಸಮಿತಿಯ ಮುಖ್ಯಸ್ಥರೂ ಆಗಿರುವ ಪೂರ್ವ ರಾಷ್ಟಾçಧ್ಯಕ್ಷರಾಗಿರುವ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ರವಿಶಂಕರ್ ಅವರ ಪರಿಕಲ್ಪನೆಯಲ್ಲಿ ಜಾರಿಗೊಂಡಿರುವ ಎಸ್. ಎಂ.ಎ. ಕಾರ್ಯಕ್ರಮ ೪೦ ವರ್ಷ ಪ್ರಾಯ ಮೀರಿದ ಜೆ.ಸಿ.ಐ. ಸದಸ್ಯರಿಗೆ ವರದಾನವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ಎಸ್. ಎಂ.ಎ. ಸದಸ್ಯರಾಗಲು ವಯಸ್ಸಿನ ಯಾವುದೇ ಗರಿಷ್ಠ ಮಿತಿಯ ನಿರ್ಬಂಧವಿಲ್ಲ. ೪೦ ವರ್ಷ ಪ್ರಾಯ ಮೀರಿದವರು ಸದಸ್ಯರಾಗ ಬಹುದು. ಆದರೆ ಅವರು ಹಾಲಿ ಅಥವಾ ಮಾಜಿ ಜೇಸಿ ಸದಸ್ಯರಾಗಿರ ಬೇಕು. ಯಾವುದೇ ಜೇಸಿಸ್ ಘಟಕಗಳಲ್ಲಿ ಸಕ್ರಿಯರಾಗಿಲ್ಲದ ಜೇಸಿಸ್ ನ ಮಾಜಿ ಸದಸ್ಯರಿಗೂ ಎಸ್. ಎಂ.ಎ. ಸದಸ್ಯತ್ವ ಪಡೆಯಲು ಮುಕ್ತ ಅವಕಾಶವಿದೆ ಎಂದು ವಿವರಿಸಿರುವ ಕುಮಾರ್ ಅವರು, ಎಸ್. ಎಂ.ಎ.ಗೆ ಕೊಡಗು ಜಿಲ್ಲೆಯಲ್ಲಿಯೂ ಉತ್ತಮ ಸ್ಪಂದನ ದೊರೆಯುತ್ತಿದೆ ಎಂದರು. ಕೊಡಗಿನ ಹುದಿಕೇರಿ, ಪೊನ್ನಂಪೇಟೆ, ಗೋಣಿಕೊಪ್ಪಲು, ವೀರಾಜಪೇಟೆ, ಸುಂಟಿಕೊಪ್ಪ, ಸೋಮವಾರಪೇಟೆ, ಕುಶಾಲನಗರ ಭಾಗಗಳಿಂದ ಎಸ್. ಎಂ.ಎ. ಸದಸ್ಯರಿದ್ದಾರೆ. ಕಳೆದ ಫೆಬ್ರವರಿ ೧೦ ರಿಂದ ಮಾ. ೧೦ರವರೆಗೆ ನಡೆದ ಸದಸ್ಯತ್ವ ಅಭಿಯಾನದಲ್ಲಿಯೂ ಕೊಡಗು ಜಿಲ್ಲೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮಾಹಿತಿ ನೀಡಿದ ಕುಮಾರ್ ಅವರು, ಮುಂದಿನ ಮೇ ತಿಂಗಳಿನಲ್ಲಿ ಕೊಡಗಿನಲ್ಲಿ ಎಸ್. ಎಂ.ಎ. ಸದಸ್ಯರಿಗಾಗಿ ‘ಕೊಡಗು ಫೆಸ್ಟ್' ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಅಲ್ಲದೆ, ಇದೇ ತಿಂಗಳ ೨೪ ಮತ್ತು ೨೫ ರಂದು ಸಕಲೇಶಪುರದಲ್ಲಿ ಎಸ್. ಎಂ.ಎ. ಸದಸ್ಯರ ಸಮ್ಮಿಲನ ಏರ್ಪಡಿಸಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಎಸ್.ಎಂ.ಎ. ರಾಷ್ಟಿçÃಯ ಮಂಡಳಿ ಸದಸ್ಯ ಕೊಡಗಿನ ಎ.ಎಸ್. ಕಾರ್ಯಪ್ಪ ಅವರು ಮಾತನಾಡಿ, ಪ್ರಸಕ್ತ ವರ್ಷಾಂತ್ಯದೊಳಗೆ ದೇಶದಲ್ಲಿ ಒಟ್ಟು ೧೦.೦೦೦ ಎಸ್. ಎಂ.ಎ. ಸದಸ್ಯರನ್ನು ಸಂಸ್ಥೆಗೆ ಸೇರಿಸುವ ಗುರಿಹೊಂದಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯ ನಿರ್ವಹಿಸಲಾಗುತ್ತಿದೆ. ಎಸ್. ಎಂ.ಎ. ವಿಭಾಗದ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ವಲಯ ೧೪ ದೇಶದ ಅತ್ಯುತ್ತಮ ವಲಯಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದೆ. ವಲಯ೧೪ರಲ್ಲಿ ಸದಸ್ಯತ್ವ ಪಡೆಯಲು ಮತ್ತಷ್ಟು ಜನರು ಉತ್ಸುಕರಾಗಿ ಎಸ್. ಎಂ.ಎ.ಯೆಡೆಗೆ ಒಲವು ತೋರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕೊಡಗಿನಲ್ಲಿ ಶೀಘ್ರದಲ್ಲೇ ಮತ್ತೊಂದು ಸುತ್ತಿನ ಸದಸ್ಯತ್ವ ಅಭಿಯಾನ ನಡೆಸಿ ಎಸ್. ಎಂ.ಎ. ಆಂದೋಲನವನ್ನು ಮತ್ತಷ್ಟು ಗಟ್ಟಿಗೊಳಿಸಲು ಚಿಂತಿಸಲಾಗಿದೆ ಎಂದು ಅವರು ನುಡಿದರು.
ಗೋಷ್ಠಿಯಲ್ಲಿ ಎಸ್. ಎಂ.ಎ. ವಲಯ ಸಂಯೋಜಕರಾದ ಬಿ.ಈ. ಕಿರಣ್, ಕೇಚಮಾಡ ಶಿವ ನಾಚಪ್ಪ, ಹಿರಿಯ ಸದಸ್ಯ ಎ.ಎಸ್. ಟಾಟು ಮೊಣ್ಣಪ್ಪ, ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಎ.ಪಿ. ದಿನೇಶ್ ಉಪಸ್ಥಿತರಿದ್ದರು.