ಸೋಮವಾರಪೇಟೆ,ಮಾ.೧೮: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ವಿದ್ಯುತ್ ಗ್ರಾಹಕರ ಸಂಪರ್ಕ ಸಭೆ ತಾ. ೧೯ರಂದು (ಇಂದು) ಬೆಳಿಗ್ಗೆ ೧೧ಗಂಟೆಗೆ ಹಾನಗಲ್ಲು ಬಾಣೆ ಗ್ರಾಮದ ಉಪವಿಭಾಗ ಕಚೇರಿ ಆವರಣದಲ್ಲಿ ನಡೆಸಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಧನಂಜಯ ತಿಳಿಸಿದ್ದಾರೆ.
ಸಭೆಯಲ್ಲಿ ಸೋಮವಾರಪೇಟೆ, ಶಾಂತಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ, ಆಲೂರುಸಿದ್ಧಾಪುರ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಪಾಲ್ಗೊಂಡು ತಮ್ಮ ಕುಂದು ಕೊರತೆ ಅಥವಾ ದೂರುಗಳಿದ್ದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕೆAದು ಮನವಿ ಮಾಡಿದ್ದಾರೆ.