ಮಡಿಕೇರಿ, ಮಾ. ೧೮: ಕರ್ನಾಟಕ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿ ಮತ್ತು ಸುಳ್ಯದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂವರ್ಧನಾ ಸಮಿತಿ, ವತಿಯಿಂದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂವರ್ಧನಾ ಸಮಿತಿಯ ಗ್ರಾಮದ ಸಂಚಾಲಕರು ಮತ್ತು ಸಹ ಸಂಚಾಲಕರ ಸಭೆ ಕೆ.ಎಸ್. ಗೌಡ ಕಾಲೇಜು-ನಿಂತಿಕಲ್ಲಿನಲ್ಲಿ ನಡೆಯಿತು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂವರ್ಧನಾ ಸಮಿತಿಯ ಧ್ಯೇಯೋದ್ದೇಶಗಳ ಕುರಿತು ಅರೆಭಾಷೆ ಅಕಾಡೆಮಿಯ ಸದಸ್ಯ ಕುಸುಮಾಧರ ಎ.ಟಿ ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮ ನಾರಾಯಣ ಕಜೆಗದ್ದೆ ಮಾತನಾಡಿ, ಅಕಾಡೆಮಿಯ ಎರಡು ವರ್ಷಗಳ ಕೆಲಸಕಾರ್ಯಗಳನ್ನು ವಿವರಿಸುತ್ತ, ಅರೆಭಾಷೆಯಲ್ಲಿ ಸೃಜನಶೀಲ ಬರವಣಿಗೆಯ ಕೊರತೆಯಿದ್ದು ಯುವ ಬರಹಗಾರರು ಬರವಣಿಗೆ ಯಲ್ಲಿ ತೊಡಗಿಸಿಕೊಳ್ಳಬೇಕು, ಒಂದು ಭಾಷೆ ಶ್ರೀಮಂತವಾಗ ಬೇಕಾದರೆ ಅದರಲ್ಲಿ ರಂಗಭೂಮಿ, ಯಕ್ಷಗಾನ, ಸುಗಮ ಸಂಗೀತದAತಹ ಕಲಾಪ್ರಕಾರಗಳಲ್ಲಿ ಸಮುದಾಯದವರು ತೊಡಗಿಸಿ ಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಅ.ಸಂ. ಮತ್ತು ಸಂ. ಸಮಿತಿಯ ಗೌರವಾಧ್ಯಕ್ಷೆ ಆಶಾ ತಿಮ್ಮಪ್ಪ ಮಾತನಾಡಿ, ಅರೆಭಾಷಿಗರು ಮನೆಯಲ್ಲಿ ಮಕ್ಕಳೊಂದಿಗೆ ಹಾಗೂ ಮನೆಯವರೊಂದಿಗೆ ಅರೆಭಾಷೆಯಲ್ಲೇ ವ್ಯವಹರಿಸುವುದರ ಜೊತೆಗೆ ಆಚರಿಸುವ ಮದುವೆ ಹಬ್ಬ ಹರಿದಿನಗಳಲ್ಲಿ ಹಿಂದಿನಿAದ ಬಂದ ಸಂಪ್ರದಾಯಗಳನ್ನೇ ಅಳವಡಿಸಿ ಕೊಳ್ಳಬೇಕು.
ಸಮುದಾಯದ ಕುಟುಂಬಗಳಲ್ಲಿ ಆಚರಿಸುವ ಶುಭ ಅಶುಭ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕ ಉಡುಪುಗಳನ್ನೇ ಧರಿಸಿದರೆ ಸೂಕ್ತ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮಕ್ಕೆ ಸಮಿತಿಯ ಕರಡು ಬೈಲಾವನ್ನು ಅಕಾಡೆಮಿ ಸದಸ್ಯ ಪುರುಷೋತ್ತಮ ಕಿರ್ಲಾಯ ತಿಳಿಸಿದರು.
ಅರೆಭಾಷೆ ಸಂ. ಮತ್ತು. ಸಾ.ಸಂ ಸಮಿತಿಯ ಕೇಂದ್ರೀಯ ಮತ್ತು ಗ್ರಾಮಗಳ ಸಂಚಾಲಕ, ಸಹಸಂಚಾಲಕರನ್ನು ಅಧ್ಯಕ್ಷೆ ಆಶಾ ತಿಮ್ಮಪ್ಪ ಘೋಷಣೆಮಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗ್ರಾಮಗಳ ಸಂಚಾಲಕ ಸಹಸಂಚಾಲ ಕರೊಂದಿಗೆ ಸಂವಾದ ನಡೆಸಲಾಗಿ, ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಮೇ ತಿಂಗಳ ೨೨ರಂದು ಸುಳ್ಯ ನಗರದಲ್ಲಿ ಅರೆಭಾಷೆ ಸಮ್ಮೇಳನ ನಡೆಸುವುದೆಂದು ತೀರ್ಮಾನಿಸ ಲಾಯಿತು ಈ ಸಮ್ಮೇಳನದಲ್ಲಿ ಕೊಡಗು, ದ.ಕ, ಕೇರಳ ರಾಜ್ಯದ ಅರೆಭಾಷಿಗರು ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷ ಆಶಾತಿಮ್ಮಪ್ಪ ಮತ್ತು ಅಕಾಡೆಮಿ ಸದಸ್ಯ ಕುಸುಮಾಧರ ಎ.ಟಿ ತಿಳಿಸಿದರು.
ಈ ಸಂದರ್ಭ ಅಕಾಡೆಮಿಯ ಸದಸ್ಯರಾದ, ಜಯಪ್ರಕಾಶ್ ಮೋಂಟಡ್ಕ, ಕಿರಣ್ ಕುಂಬಳಚೇರಿ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು ೮೦ ಜನ ಸಂಚಾಲಕ, ಸಹಸಂಚಾಲಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಯತೀಶ್ ಅರ್ವಾರ್ ನಿರೂಪಿಸಿ, ಅನುಪ್ ನರಿಯೂರು ವಂದಿಸಿದರು.