ಭಾಗಮAಡಲ, ಮಾ. ೧೮: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯೋರ್ವನನ್ನು ಪೋಕ್ಸೊ ಕಾಯ್ದೆಯಡಿ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತೆ ಬಾಲಕಿಯೋರ್ವಳು ನಿನ್ನೆ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬಗ್ಗೆ ವಿಚಾರಿಸಲಾಗಿ ಆಕೆಯ ಮೇಲೆ ಹಲವು ತಿಂಗಳ ಹಿಂದೆ ಅತ್ಯಾಚಾರವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬAಧ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣವನ್ನು ಮಹಿಳಾ ಠಾಣೆಗೆ ವರ್ಗಾಯಿಸಿದ್ದು, ಬಾಲಕಿಯನ್ನು ವಿಚಾರಿಸಿದ ಸಂದರ್ಭ ಅತ್ಯಾಚಾರವೆಸಗಿದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದಾಳೆ.
ಇದೀಗ ಪೊಲೀಸರು ಚೇರಂಗಾಲದ ನಿವಾಸಿ ವಿವಾಹಿತ ಎರಡು ಮಕ್ಕಳ ತಂದೆಯಾಗಿರುವ ಮೊಟ್ಟನ ಅರುಣ್ಕುಮಾರ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.