ಮಡಿಕೇರಿ, ಮಾ. ೧೭: ನಗರಸಭೆ ನಡಿಗೆ ವಾರ್ಡ್ಗಳ ಕಡೆಗೆ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಇಂದು ನಗರಸಭೆಯ ತಂಡ ಅಧ್ಯಕ್ಷೆ ಅನಿತಾ ಪೂವಯ್ಯ ನೇತೃತ್ವದಲ್ಲಿ ೨೩ನೇ ವಾರ್ಡ್ಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿತು.

ರಸ್ತೆ ಸಮಸ್ಯೆ, ಚರಂಡಿ ಅವ್ಯವಸ್ಥೆ, ಕುಡಿಯುವ ನೀರಿನ ಸಂಪರ್ಕ ಸಮಸ್ಯೆ, ಕೆಲ ಮನೆಗಳ ಮೇಲೆ ಬೀಳುವ ಸ್ಥಿತಿಯಲ್ಲಿರುವ ಮರಗಳು ಹೀಗೆ ಹಲವಾರು ಸಮಸ್ಯೆಗಳ ಬಗ್ಗೆ ಅಲ್ಲಿನ ನಿವಾಸಿಗಳು ನಗರಸಭೆ ತಂಡದ ಗಮನ ಸೆಳೆದರು. ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ ಅಧ್ಯಕ್ಷೆ ಅನಿತಾ ಪೂವಯ್ಯ ಅವುಗಳನ್ನು ದಾಖಲು ಮಾಡಿಕೊಂಡು ಪರಿಹರಿಸುವ ಭರವಸೆ ನೀಡಿದರು.

ಈ ಸಂದರ್ಭ ಆಯುಕ್ತ ರಾಮದಾಸ್, ನಗರಸಭಾ ಸದಸ್ಯರುಗಳಾದ ಶಾರದ ನಾಗರಾಜ್, ಎಸ್.ಕೆ. ಸತೀಶ್ ಮತ್ತಿತರರು ಹಾಜರಿದ್ದರು. ತಾ.೨೪ರಂದು ನಗರಸಭೆಯ ತಂಡ ೨ನೇ ವಾರ್ಡ್ಗೆ ಭೇಟಿ ನೀಡಲಿದೆ.