ಶನಿವಾರಸAತೆ, ಮಾ. ೧೭: ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಅವರ ನಿರ್ದೇಶನ ಮೇರೆ ಶನಿವಾರಸಂತೆ ಠಾಣಾಧಿಕಾರಿ ಗೋವಿಂದ್‌ರಾಜ್, ಸಿಬ್ಬಂದಿಗಳಾದ ಪದ್ಮನಾಯಕ್, ನೆಹರುಕುಮಾರ್ ಇತರರು ೧೫ ಮಂದಿಗೆ ರೂ. ೭,೫೦೦ ದಂಡ ವಿಧಿಸಿದರು.

ಶನಿವಾರಸಂತೆ ಗುಡುಗಳಲೆಯಲ್ಲಿ ಯಾವುದೇ ದಾಖಲೆಗಳಿಲ್ಲದೆ ಆಟೋರಿಕ್ಷಾಗಳು ಓಡಾಡುತ್ತಿರುವ ಬಗ್ಗೆ ದೂರುಗಳಿದ್ದು, ಅಂತಹ ಆಟೋರಿಕ್ಷಾಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಸ್.ಐ. ಗೋವಿಂದ್‌ರಾಜ್ ಎಚ್ಚರಿಸಿದರು.