ಶನಿವಾರಸಂತೆ, ಮಾ. ೧೬: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟಿçÃಯ ಕ್ರೀಡಾಪಟು ಶಿವರಳ್ಳಿ ಗ್ರಾಮದ ಎಸ್.ಕೆ. ಪಲ್ಲವಿ ಅವರಿಗೆ ಸನ್ಮಾನ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನ ರೂ. ೩ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಅಡುಗೆ ಕೊಠಡಿ ಉದ್ಘಾಟನಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಲೆಯ ಮುಖ್ಯ ಶಿಕ್ಷಕ ಡಿ.ಎಲ್. ಮೂರ್ತಿ ಮಾತನಾಡಿ, ಶಾಲೆಯ ಹಳೆಯ ವಿದ್ಯಾರ್ಥಿನಿ ಕೆ.ಎಸ್. ಪಲ್ಲವಿ ಬ್ಯಾಡ್ಮಿಂಟನ್ ಕ್ರೀಡಾಪಟುವಾಗಿದ್ದು, ರಾಷ್ಟçಮಟ್ಟದ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿ ರಾಜ್ಯ ಸರಕಾರದ ಕ್ರೀಡಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ಇದೇ ಸಂದರ್ಭ ಗುತ್ತಿಗೆದಾರ ಜೆ.ಎಂ. ಲತೀಫ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಬಸವರಾಜ್, ನೌಕರರ ಸಂಘದ ನಿರ್ದೇಶಕ ಶಿವಕುಮಾರ್, ಸಿ.ಆರ್.ಪಿ. ಸುರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದಾ, ಸದಸ್ಯರಾದ ದಿನೇಶ್ ಕುಮಾರ್, ಎಂ. ಹನೀಫ್, ರೇಣುಕಾ, ದೊಡ್ಡಯ್ಯ ಮಾತನಾಡಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಶ್ವನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಫಯಾಜ್, ಕೆಂಚಯ್ಯ, ಕುಮಾರಪ್ಪ, ಹಿರಿಯಣ್ಣಯ್ಯ, ರಾಜು, ಗೋವಿಂದ್, ಶಿಕ್ಷಕ ಫಯಾಜ್, ಶಿಕ್ಷಕಿಯರಾದ ಬಾನು, ಕುಸುಮಾ ಉಪಸ್ಥಿತರಿದ್ದರು.