ಮಡಿಕೇರಿ, ಮಾ. ೧೬: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ೨೦೨೧-೨೨ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಂತಿಮ ಬಿ.ಕಾಂ (ಸಿಎ) ವಿದ್ಯಾರ್ಥಿನಿ ಪೂಜಿತಾ ಪಿ.ಎಂ ಅಧ್ಯಕ್ಷೆ ಹಾಗೂ ಅಂತಿಮ ಬಿಎಸ್ಸಿ (ಸಿಬಿಝೆಡ್) ವಿದ್ಯಾರ್ಥಿನಿ ಅನನ್ಯ ಅನಂತ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಅಂತಿಮ ಬಿಎಸ್ಸಿ (ಪಿಸಿಎಂ) ವಿದ್ಯಾರ್ಥಿನಿ ಪ್ರತೀಕ್ಷಾ ಸಿ.ಐ, ಜಂಟಿ ಕಾರ್ಯದರ್ಶಿಯಾಗಿ ದ್ವಿತೀಯ ಬಿಸಿಎ ವಿಭಾಗದ ಮದನ್ ಕೆ.ಹೆಚ್ ಮತ್ತು ದ್ವಿತೀಯ ಬಿ.ಕಾಂ.ನ ಅಪೂರ್ವ ಹೆಚ್.ಜಿ, ಸಾಂಸ್ಕೃತಿಕ ಕಾರ್ಯದರ್ಶಿಂ iÀiÁಗಿ ದ್ವಿತೀಯ ಬಿಸಿಎ ವಿಭಾಗದ ಯತೀಶ್ ಪಿ.ವಿ. ಮತ್ತು ದ್ವಿತೀಯ ಬಿಎಸ್ಸಿ (ಎಂಸಿಝೆಡ್)ಯ ಹಿಬಾತುಲ್ ಬಿ.ಎ. ಅವರು ಆಯ್ಕೆಯಾಗಿದ್ದಾರೆ.

ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಅಂಕಗಳ ಜ್ಯೇಷ್ಠತಾ ಆಧಾರದಲ್ಲಿ ನಡೆಸಲಾಗಿದ್ದು, ಆಯ್ಕೆ ಸಮಿತಿಯ ಸದಸ್ಯ ಸ್ನಾತಕೋತ್ತರ ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಡಾ. ಇ. ತಿಪ್ಪೇಸ್ವಾಮಿ, ಹಿಂದಿ ಉಪನ್ಯಾಸಕ ಬಿ.ಹೆಚ್. ತಲವಾರ, ಇಂಗ್ಲೀಷ್ ಉಪನ್ಯಾಸಕ ಹೆಚ್.ಆರ್. ರಮೇಶ, ಇತಿಹಾಸ ವಿಭಾಗದ ಮುಖ್ಯಸ್ಥ ಮೇ. ಡಾ. ರಾಘವ ಬಿ, ಭೌತಶಾಸ್ತç ಪ್ರಾದ್ಯಾಪಕ ಡಾ. ನಾಗರಾಜ್, ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಡಾ. ರೇಣುಶ್ರೀ, ಸ್ನಾತಕೋತ್ತರ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ. ನಯನಕಶ್ಯಪ್, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಲಕ್ಷಿö್ಮದೇವಿ ಅವರು ಉಪಸ್ಥಿತರಿದ್ದರು.