ಸಿದ್ದಾಪುರ, ಮಾ. ೧೭ : ಸುಮಾರು ೧೪೦ ವರ್ಷಗಳ ಇತಿಹಾಸ ವಿರುವ ಪುರಾತನ ಸೇತುವೆಯಲ್ಲಿ ಗಿಡ, ಗಂಟಿಗಳು ಬೆಳೆದು ಸಂಬAಧಪಟ್ಟ ಇಲಾಖೆಯ ನಿರ್ಲಕ್ಷö್ಯಕ್ಕೆ ಬಲಿಯಾಗಿದ್ದು ಪುರಾತನ ಸೇತುವೆ ತನ್ನ ಭೀಮ ಬಲವನ್ನು ಕಳೆದುಕೊಂಡಿದೆ. ಸೋಮವಾರಪೇಟೆ ತಾಲೂಕಿನ ಗಡಿ ಗ್ರಾಮ ನೆಲ್ಯಹುದಿಕೇರಿ ಹಾಗೂ ವೀರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕೊಡಗಿನ ಜೀವ ನದಿ ಕಾವೇರಿ ನದಿಗೆ ಅಡ್ಡಲಾಗಿ ೧೮೮೩ರಲ್ಲಿ ಬ್ರಿಟಿಷರ ಕಾಲದಲ್ಲಿ ಈ ಸೇತುವೆ ನಿರ್ಮಾಣವಾಗಿತ್ತು. ಈ ಸೇತುವೆಯು ಕೇವಲ ಗ್ರಾಮ ಗ್ರಾಮಗಳ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಮಾತ್ರವಲ್ಲದೆ ಇದು ಸಿದ್ದಾಪುರದಿಂದ ವೀರಾಜಪೇಟೆ, ಮಾಕುಟ್ಟ ಮೂಲಕ ಅಂತರ್ ರಾಜ್ಯಕ್ಕೂ ಸಂಪರ್ಕ ಕಲ್ಪಿಸುತ್ತದೆ. ನೆಲ್ಲಿಹುದಿಕೇರಿಯ ಐತಿಹಾಸಿಕ ಹಿನ್ನೆಲೆಯಿರುವ ಈ ಪುರಾತನ ಸೇತುವೆಯು ಪುರಾತತ್ವ ಇಲಾಖೆ ಪಟ್ಟಿಯಲ್ಲಿರುವ ಜಿಲ್ಲೆಯ ಬೆರಳೆಣಿಕೆಯಷ್ಟಿರುವ ಸೇತುವೆಗಳಲ್ಲಿ ಒಂದಾಗಿದೆ.
ಪುರಾತನ ಸೇತುವೆಯ ಸಮೀಪವೇ ನೂತನ ಸೇತುವೆ ನಿರ್ಮಾಣವಾದ ಕಾರಣ ಇದೀಗ ಹಳೆಯ ಸೇತುವೆಯನ್ನು ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ನಿರ್ಲಕ್ಷ್ಯ ತೋರಿದ ಪರಿಣಾಮ, ನಿರ್ವಹಣೆ ಇಲ್ಲದೆ ಐತಿಹಾಸಿಕ ಸೇತುವೆ ನೆನೆಗುದಿಗೆ ಬಿದ್ದಿರುವುದು ದುರದೃಷ್ಟಕರ ಸಂಗತಿ. ನೆಲ್ಲಿಹುದಿಕೇರಿ ಶ್ರೀ ಮುತ್ತಪ್ಪ ಯುವ ಕಲಾ ಸಂಘದ ಅಧ್ಯಕ್ಷ ಶರಣ್ ಪ್ರಕಾಶ್ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿರುವ ನೆಲ್ಲಿಹುದಿಕೇರಿಯ ಈ ಸೇತುವೆಯು ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷö್ಯಕ್ಕೆ ಬಲಿಯಾಗಿ ಅಳಿವಿನಂಚಿಗೆ ತಲುಪಿದೆ. ಸೇತುವೆಯು ಸೂಕ್ತ ನಿರ್ವಹಣೆಯಿಲ್ಲದೆ ಇದ್ದರೆ ಮುಂದಿನ ಪೀಳಿಗೆಗೆ ನೋಡಲು ಕುರುಹುಗಳು ಮಾತ್ರ ಉಳಿದಿರುವುದರಲ್ಲಿ ಸಂಶಯವಿಲ್ಲ.
ಸ್ಥಳೀಯ ಯುವಕ ಸಂಘಗಳಾದ ಡೊಮಿನಾಸ್ ಹಾಗೂ ಮುತ್ತಪ್ಪ ಯುವಕಲಾ ಸಂಘದವರು ಸೇತುವೆ ಮೇಲೆ ಬೆಳೆದಿರುವ ಗಿಡಗಂಟಿಗಳನ್ನು ಕಡಿದು ಸೇತುವೆಯ ರಕ್ಷಣೆಗೆ ಮುಂದಾಗಿದ್ದರೂ ಕೂಡ ಅವರ ಶ್ರಮ ವ್ಯರ್ಥವಾಗಿದೆ. ಆದುದರಿಂದ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಪುರಾತನ ಸೇತುವೆಯ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಡಾಮಿನಾಸ್ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಶಿಹಾಬುದ್ದಿನ್ ವಿಪಿಎಸ್ ಮಾತನಾಡಿ, ನೆಲ್ಲಿಹುದಿಕೇರಿಯ ಪುರಾತನ ಸೇತುವೆಯು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷದಿಂದ ಇದೀಗ ಪುಂಡ ಪೋಕರಿಗಳ ತಾಣವಾಗಿ ಮಾರ್ಪಾಡು ಹೊಂದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಕಳೆದ ಬಾರಿ ನಮ್ಮ ಸಂಘಟನೆಯು ಈ ಸೇತುವೆಯ ರಕ್ಷಣೆಗೆ ಮುಂದಾಗಿ ಶ್ರಮದಾನ ಮಾಡಿದೆವು. ಇಲ್ಲಿನ ಸಂಘ ಸಂಸ್ಥೆಗಳಿಗಿರುವ ಕಾಳಜಿ ಈ ಅಧಿಕಾರಿಗಳಿಗೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಪುರಾತನ ಸೇತುವೆಯ ರಕ್ಷಣೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗದಿದ್ದಲ್ಲಿ ಮುಂದೊAದು ದಿನ ನೆಲ್ಲಿಹುದಿಕೇರಿಯಲ್ಲೂ ಒಂದು ಸೇತುವೆ ಇತ್ತು ಎಂದು ಹೇಳುವ ಕಾಲ ದೂರವಿಲ್ಲ. ಅದಕ್ಕೂ ಮೊದಲು ಸಂಬAಧಪಟ್ಟ ಅಧಿಕಾರಿಗಳು ಸೇತುವೆಯ ಸಂರಕ್ಷಣೆಗೆ ಮುಂದಾಗಬೇಕೆAಬುದು ನಮ್ಮ ಆಶಯ.