ಸೋಮವಾರಪೇಟೆ, ಮಾ. ೧೬: ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಮನೆ, ಅಂಗಡಿ, ದೇವಾಲಯಗಳಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಹೆಡೆಮುರಿ ಕಟ್ಟುವಲ್ಲಿ ಸೋಮವಾರ ಪೇಟೆ ಪೊಲೀಸರು ಯಶಸ್ವಿಯಾಗಿದ್ದು, ಬಂದಿತರಿAದ ರೂ. ೩.೭೦ ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ನಡೆದ ಬೈಕ್ ಕಳ್ಳತನ, ಪಟ್ಟಣದ ಸೋಮೇಶ್ವರ ಹಾಗೂ ಆಂಜನೇಯ ದೇವಾಲಯ, ಮೈಸೂರು ಹಾಗೂ ಹಾಸನ ಜಿಲ್ಲೆ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಮನೆಗಳ ಕಳ್ಳತನ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಸಮೀಪದ ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಗಾಂಧಿನಗರದ ಅರವಿಂದ ಅವರ ಪುತ್ರ ಸಂಜಯ್‌ಕುಮಾರ್, ಕುಶಾಲನಗರ ಮುಳ್ಳುಸೋಗೆ ಗ್ರಾಮದ ಚಂದ್ರಾಚಾರಿ ಅವರ ಪುತ್ರ ಸುನಿಲ್ ಕುಮಾರ್, ಕರ್ಕಳ್ಳಿ ಗ್ರಾಮದ ಸುಬ್ರಮಣಿ ಅವರ ಪುತ್ರ ವಿನೋದ್ (ಪಾಪಣ್ಣಿ) ಅವರುಗಳನ್ನು ಬಂಧಿಸಿದ್ದಾರೆ.
ಕಳೆದ ತಾ. ೧೨ ರಂದು ನಡೆದಿದ್ದ ಮಸಗೋಡು ಗ್ರಾಮದ ವಿಕ್ರಂ ಅವರ ಬೈಕ್ ಕಳ್ಳತನ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಸಂಜಯ್ ಹಾಗೂ ಸುನಿಲ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ ಸಂದರ್ಭ ಇತರ ಕಳ್ಳತನ ಪ್ರಕರಣಗಳನ್ನು ಬಾಯಿಬಿಟ್ಟಿದ್ದಾರೆ.
ಆರೋಪಿಗಳು ಸೋಮವಾರ ಪೇಟೆಯ ಸೋಮೇಶ್ವರ ಹಾಗೂ ಆಂಜನೇಯ ದೇವಾಲಯಗಳ ಹುಂಡಿ ಕಳ್ಳತನ, ಹಾಸನ ಜಿಲ್ಲೆಯ ಹಲವು ಭಾಗಗಳಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಚಿನ್ನಾಭರಣ, ನಗದು ದೋಚುತ್ತಿದ್ದ ಕೃತ್ಯ, ಮಸಗೋಡು ಗ್ರಾಮದ ವಿಕ್ರಂ ಅವರ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಗ್ಗೆ ಪೊಲೀಸರ ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ.
ಮನೆ ಹಾಗೂ ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದ ನಗದು, ೨೦ ಗ್ರಾಂ ಚಿನ್ನಾಭರಣ, ಸೋಮವಾರಪೇಟೆ ಹಾಗೂ ಮೈಸೂರಿನಲ್ಲಿ ಕಳವು ಮಾಡಿದ್ದ ೪ ಬೈಕ್‌ಗಳು ಸೇರಿದಂತೆ ೩ ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಅಂತೆಯೇ ಕರ್ಕಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸೀತಮ್ಮ ಅವರ ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದ ಆರೋಪಿ, ಕರ್ಕಳ್ಳಿಯ ವಿನೋದನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನಿಂದ ೭೦ ಸಾವಿರ ಮೌಲ್ಯದ ೧೫ ಗ್ರಾಂ ಚಿನ್ನಾಭರಣವನ್ನು ವಶಪಡಿಸಿ ಕೊಂಡಿದ್ದಾರೆ.
ಬAದಿತ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿರುವ ಸೋಮವಾರಪೇಟೆ ಪೊಲೀಸರು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರ ಮಾರ್ಗದರ್ಶನ ಹಾಗೂ ಡಿವೈಎಸ್‌ಪಿ ಶೈಲೇಂದ್ರಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ಉಪ ನಿರೀಕ್ಷಕ ವಿರೂಪಾಕ್ಷ, ಪ್ರೊಬೇಷನರಿ ಎಸ್.ಐ. ಕಾಶಿನಾಥ್, ಸಿಬ್ಬಂದಿಗಳಾದ ಸಜಿ, ಶಿವಕುಮಾರ್, ಅನಂತ್, ನವೀನ್, ಅಬ್ದುಲ್ ರೆಹಮಾನ್, ಮಂಜುನಾಥ್, ಬಸಪ್ಪ ಕೊಟಗಿ, ಮಂಜುನಾಥ ಮತ್ತು ಉಪ ವಿಭಾಗದ ಅಪರಾಧ ಪತ್ತೆದಳದ ಎಎಸ್‌ಐ ಗೋಪಾಲ್, ದಯಾನಂದ, ಪ್ರವೀಣ್ ಅವರುಗಳು ಭಾಗವಹಿಸಿದ್ದರು.
ಮಡಿಕೇರಿ ಸಿಡಿಆರ್ ಘಟಕದ ರಾಜೇಶ್, ಗಿರೀಶ್, ಪ್ರವೀಣ್ ಅವರು ತಾಂತ್ರಿಕ ಸಹಕಾರ ನೀಡಿದ್ದು, ತಂಡದ ಕಾರ್ಯಾಚರಣೆಯನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.