ಮಡಿಕೇರಿ, ಮಾ. ೧೭: ಹಿಜಾಬ್ ವಿವಾದಕ್ಕೆ ಸಂಬAಧಿಸಿದAತೆ ಪ್ರಕಟಗೊಂಡ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜ್ಯಮಟ್ಟದಲ್ಲಿ ಕರೆ ನೀಡಲಾಗಿದ್ದ ಬಂದ್ಗೆ ಕೊಡಗಿನಲ್ಲೂ ಮುಸ್ಲಿಂ ವರ್ತಕರು, ಉದ್ಯಮಿಗಳು ಬೆಂಬಲ ಸೂಚಿಸಿದರು. ಶಾಲಾ - ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ. ಸಮವಸ್ತç ಸಂಹಿತೆ ಕಡ್ಡಾಯ ಎಂದು ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಬಗ್ಗೆ ಅಸಮಾಧಾನಗೊಂಡು ಬೆಂಗಳೂರಿನ ಉಲಮಾ ಕೌನ್ಸಿಲ್ನ ಪ್ರಮುಖರಾದ ಮೌಲಾನ ಸಗೀರ್ ಅಹ್ಮದ್
ಅವರು ಇಸ್ಲಾಂ ಧಾರ್ಮಿಕ ಮುಖಂಡರುಗಳ ಸಭೆ ನಡೆಸಿ ರಾಜ್ಯಾದ್ಯಂತ ಎಲ್ಲಾ ಮುಸ್ಲಿಂ ಸಮುದಾಯದವರು ತಮ್ಮ ಅಂಗಡಿಮುAಗಟ್ಟುಗಳನ್ನು ಮುಚ್ಚಿ ಬಂದ್ ನಡೆಸುವಂತೆ ಕರೆ ನೀಡಿದ್ದರು. ಅದರನ್ವಯ ಕೊಡಗಿನಲ್ಲೂ ಬಂದ್ಗೆ ಮುಸ್ಲಿಂ ಸಮುದಾಯದ ವರ್ತಕರು ಕೈ ಜೋಡಿಸಿದರು.
ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಿಯೂ ಬಹುತೇಕ ಮುಸ್ಲಿಂ ಸಮುದಾಯದ ವರ್ತಕರು ತಮ್ಮ ಅಂಗಡಿ - ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ನ್ಯಾಯಾಲಯದ ತೀರ್ಪಿನ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಮಡಿಕೇರಿ ಮಾತ್ರವಲ್ಲದೆ ಸಿದ್ದಾಪುರ, ಸುಂಟಿಕೊಪ್ಪ, ಕಡಂಗ, ಕುಶಾಲನಗರ, ನಾಪೋಕ್ಲು, ಪೆರಾಜೆ, ವೀರಾಜಪೇಟೆ, ಸೋಮವಾರಪೇಟೆ ಮತ್ತಿತರ ಕಡೆಗಳಲ್ಲಿ ಮುಸ್ಲಿಂ ವರ್ತಕರು ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್ಗೆ ಬೆಂಬಲ ಸೂಚಿಸಿದರು.ವೀರಾಜಪೇಟೆ: ವೀರಾಜಪೇಟೆಯಲ್ಲಿ ಮುಸ್ಲಿಂ ವರ್ತಕರ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಜನಸಂಖ್ಯೆ ಕೊಂಚಮಟ್ಟಿಗೆ ವಿರಳವಾಗಿತ್ತು. ಪಟ್ಟಣದಲ್ಲಿ ವಾಹನ ಸಂಚಾರ ಎಂದಿನAತಿತ್ತು. ಸುಂಟಿಕೊಪ್ಪ : ಸುಂಟಿಕೊಪ್ಪದಲ್ಲೂ ಮುಸ್ಲಿಂ ವರ್ತಕರು ಅಂಗಡಿ, ಹೊಟೇಲ್, ಫ್ಯಾನ್ಸಿ, ಬಟ್ಟೆ ಅಂಗಡಿಗಳನ್ನು ಬಂದ್ ಮಾಡಿ ಬಂದ್ ಕರೆಗೆ ಬೆಂಬಲ ಸೂಚಿಸಿದರು.
ಕುಶಾಲನಗರ: ಹಿಜಾಬ್ ನ ಕುರಿತಂತೆ ರಾಜ್ಯ ಹೈಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸಿ ರಾಜ್ಯದ ಮುಸ್ಲಿಂ ಸಮುದಾಯಗಳು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಕುಶಾಲನಗರದಲ್ಲಿ ಬಹುತೇಕ ಬೆಂಬಲ ವ್ಯಕ್ತವಾಗಿದೆ.
ಕರ್ನಾಟಕ ಬಂದ್ಗೆ ಬೆಂಬಲಿಸಿ ಕುಶಾಲನಗರದಲ್ಲಿ ಮುಸ್ಲಿಂ ಸಮುದಾಯದವರು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬೆಂಬಲ ವ್ಯಕ್ತಪಡಿಸಿದರು. ಮುಸ್ಲಿಂಮರ ದಿನಸಿ, ತರಕಾರಿ, ಹೊಟೇಲ್ಗಳು, ಕ್ಯಾಂಟೀನ್, ಹಣ್ಣಿನ ಮಳಿಗೆಗಳು, ಮಾಂಸದ ಮಳಿಗೆಗಳು, ಮೊಬೈಲ್ ಮಳಿಗೆಗಳು, ಬಟ್ಟೆ ಮಳಿಗೆಗಳು, ಚಪ್ಪಲಿ ಮಳಿಗೆಗಳು ಸೇರಿದಂತೆ ಬಹುತೇಕ ವ್ಯಾಪಾರ ವಹಿವಾಟುಗಳು ಬಂದ್ ಆಗಿದ್ದವು.
ಸಮುದಾಯದ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಸೇರಿದಂತೆ ಇನ್ನಿತರ ವಾಹನ ಚಾಲಕರು ವಾಹನವನ್ನು ಚಲಾಯಿಸದೇ ಬಂದ್ಗೆ ಬೆಂಬಲ ಸೂಚಿಸಿದರು.
ಕುಶಾಲನಗರ, ಮುಳ್ಳುಸೋಗೆ, ಕೂಡಿಗೆ, ಮಾದಾಪಟ್ಟಣ, ಬಸವನಹಳ್ಳಿ, ಗುಡ್ಡೆಹೊಸೂರು ಸೇರಿದಂತೆ ಸುತ್ತ ಮುತ್ತಲ ಪ್ರದೇಶದಲ್ಲಿರುವ ಮುಸ್ಲಿಂಮರ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು. ಇದೇ ಸಂದರ್ಭ ಮುಸ್ಲಿಂ ಸಮುದಾಯದವರು ನಡೆಸುತ್ತಿದ್ದ ಕೆಲವು ಹೊಟೇಲು ಮತ್ತು ಬೀದಿ ಬದಿ ವ್ಯಾಪಾರಸ್ಥರು ಮಾತ್ರ ದಿನವಿಡಿ ವ್ಯಾಪಾರದಲ್ಲಿ ತೊಡಗಿಸಿಕೊಂಡ ದೃಶ್ಯ ಕಂಡುಬAದಿತು. ಯಾವುದೇ ರೀತಿಯ ಬಲತ್ಕಾರ ಅಥವಾ ಒತ್ತಡ ಹೇರಿ ಅಂಗಡಿ-ಮುAಗಟ್ಟು ಬಂದ್ ಮಾಡುವ ಪ್ರಕರಣಗಳು ಕಂಡುಬAದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದುದು ಕಂಡುಬAದಿತು.ಪಾಲಿಬೆಟ್ಟ : ಹಿಜಾಬ್ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ಕರ್ನಾಟಕ ಅಮೀರ್ ಎ ಶರಿಯತ್ ಕರೆ ನೀಡಿದ ಬಂದ್ಗೆ ಪಾಲಿಬೆಟ್ಟ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು.
ಬೆಳಗ್ಗಿನಿಂದ ಸಂಜೆವರೆಗೆ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ ವರ್ತಕರು ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದರು.
ಕಡಂಗ: ಬಂದ್ ಕರೆಗೆ ಕಡಂಗ ಗ್ರಾಮದ ಮುಸ್ಲಿಂ ವರ್ತಕರು ತಮ್ಮ ಅಂಗಡಿ-ಮುAಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದರು.*ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾಮದ ಮುಸ್ಲಿಂ ವ್ಯಾಪಾರಿಗಳು ಬೆಂಬಲ ವ್ಯಕ್ತಪಡಿಸಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದರು.
ಗುರುವಾರ ಬೆಳಿಗ್ಗೆ ಹತ್ತು ಗಂಟೆಯವರೆಗೆ ವ್ಯಾಪಾರ ನಡೆಸಿದ ತಿತಿಮತಿ ಗ್ರಾಮಕ್ಕೆ ಒಳಪಡುವ ಮುಸ್ಲಿಂ ವ್ಯಾಪಾರಿಗಳು ನಂತರದಲ್ಲಿ ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಕರೆ ನೀಡಿದ ಬಂದ್ಗೆ ಬೆಂಬಲವನ್ನು ವ್ಯಕ್ತಪಡಿಸಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ದರಿಸುವ ಬಗ್ಗೆ ನ್ಯಾಯಾಲಯ ನೀಡಿದ ತೀರ್ಪಿಗೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಗೋಣಿಕೊಪ್ಪ ಪೊನ್ನಂಪೇಟೆಯಲ್ಲಿ ಯಾವುದೇ ಬಂದ್ ನಡೆಯಲಿಲ್ಲ.ಪೆರಾಜೆ: ಪೆರಾಜೆಯಲ್ಲಿ ಮುಸ್ಲಿಂ ಸಮುದಾಯದವರು ಅಂಗಡಿ ಮಾಲೀಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಬೆಂಬಲ ಸೂಚಿಸಿದರು.