ಕುಶಾಲನಗರ, ಮಾ. ೧೬: ಪ್ರತಿಯೊಬ್ಬ ಗ್ರಾಹಕ ತನ್ನ ಹಕ್ಕಿನ ಅರಿವು ಪಡೆಯುವ ಮೂಲಕ ಮೋಸ, ವಂಚನೆಯಿAದ ದೂರವಿರಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎನ್. ಸುಬ್ರಮಣ್ಯ ಸಲಹೆ ನೀಡಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದ ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಸಭಾಂಗಣದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಗತ್ಯ ವಸ್ತುಗಳ ಖರೀದಿ ಅಥವಾ ವಿವಿಧ ಸೇವೆಗಳನ್ನು ಪಡೆಯುವ ಸಂದರ್ಭ ಪ್ರತಿಯೊಬ್ಬರೂ ಗ್ರಾಹಕರಾಗುತ್ತಾರೆ. ಗ್ರಾಹಕರ ಹಕ್ಕು ಅವಕಾಶಗಳ ಬಗ್ಗೆ ಅರಿವು ಜಾಗೃತಿಯನ್ನು ಪ್ರತಿಯೊಬ್ಬರೂ ಹೊಂದಬೇಕಾಗಿದೆ ಎಂದರು.
ಗ್ರಾಹಕನ ಹಕ್ಕುಗಳನ್ನು ಸಂರಕ್ಷಿಸಲು ಸಂವಿಧಾನದಲ್ಲಿ ಅವಕಾಶವಿದೆ. ಪುರಾತನ ಕಾಲದಿಂದಲೂ ವಸ್ತು ವಿನಿಮಯ ಪದ್ಧತಿ ಜಾರಿಯಲ್ಲಿದ್ದು, ಆ ಸಂದರ್ಭ ಕೂಡ ವಸ್ತುಗಳ ಗುಣಮಟ್ಟದಲ್ಲಿ ಏರುಪೇರಾದಾಗ ಪರಿಹಾರ ಪಡೆಯುತ್ತಿದ್ದ ಪದ್ಧತಿ ಬಗ್ಗೆ ಅವರು ಮಾಹಿತಿ ಒದಗಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯೋಚಿತ ಡಿಜಿಟಲ್ ಹಣಕಾಸು ವ್ಯವಸ್ಥೆಯ ಬಗ್ಗೆ ಉಪನ್ಯಾಸ ನೀಡಿದ ಮೈಸೂರಿನ ಕಾನೂನು ಕಾಲೇಜು ಪ್ರಾಧ್ಯಾಪಕ ಎಂ. ನಾಗೇಂದ್ರ ಮೂರ್ತಿ ಮಾತನಾಡಿ, ಗ್ರಾಹಕ ಜಾಗೃತನಾದಲ್ಲಿ ವಂಚನೆ ಅಸಾಧ್ಯ, ಪ್ರತಿಯೊಬ್ಬ ಗ್ರಾಹಕ ವಸ್ತುಗಳ ಖರೀದಿ ಸಂದರ್ಭ ರಸೀದಿ ಪಡೆಯುವುದು ಆತನ ಕರ್ತವ್ಯವಾಗಿದೆ. ಜಾಹೀರಾತುಗಳ ಮೂಲಕ ಕೂಡ ಗ್ರಾಹಕನಿಗೆ ವಂಚನೆ ಮೋಸ ಆಗುವ ಸಂಭವ ಅಧಿಕವಾಗಿದ್ದು ಖರೀದಿಸುವ ವಸ್ತುಗಳ ಬಗ್ಗೆ ಸಮರ್ಪಕ ಮಾಹಿತಿ, ಗುಣಮಟ್ಟದ ವಿವರ ತಿಳಿದುಕೊಳ್ಳುವುದು ಗ್ರಾಹಕನ ಆದ್ಯ ಕರ್ತವ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ರೇಣುಕಾಂಬ, ಸದಸ್ಯರಾದ ನಿರ್ಮಲಕುಮಾರ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ನವೀನ್ ಅಂಬೆಕಲ್, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷರಾದ ಎ.ಎ ಚಂಗಪ್ಪ, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಡಿ ದಯಾನಂದ, ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಧನಂಜಯ್, ಆಹಾರ ಇಲಾಖೆ ಉಪ ನಿರ್ದೇಶಕ ಗೌರವ ಕುಮಾರ್ ಶೆಟ್ಟಿ, ತೂಕ ಮತ್ತು ಅಳತೆ ಇಲಾಖೆಯ ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು.
ಸರಕಾರಿ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲ ಡಾ. ಸೀನಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ಕಾಲೇಜು ಆವರಣದಲ್ಲಿ ಗಿಡ ನೆಡಲಾಯಿತು. ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಅತಿಥಿಗಳು ಮಾಲಾರ್ಪಣೆ ಮಾಡಿದರು.
ಈ ಸಂದರ್ಭ ಗ್ರಾಹಕ ವೇದಿಕೆ ಪದಾಧಿಕಾರಿಗಳಾದ ಗಿರೀಶ್, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಇದ್ದರು.