ನಾಪೋಕ್ಲು, ಮಾ. ೧೭: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವವು ವಿಜೃಂಭಣೆ ಯಿಂದ ನೆರವೇರಿತು.

ಗುರುವಾರ ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರ ಮನೆಯಿಂದ ಸಾಂಪ್ರದಾಯಿಕವಾಗಿ ದೇವಾಲಯಕ್ಕೆ ಆಗಮಿಸಿದ ಎತ್ತು ಪೋರಾಟ ಮತ್ತು ಹಾಲು ಬಲಿವಾಡುವಿನ ಅರ್ಪಣೆ ಯೊಂದಿಗೆ ದೇವಳದಲ್ಲಿ ಉತ್ಸವ ಆರಂಭಗೊAಡಿತು. ಅದರೊಂದಿಗೆ ಇನ್ನಿತರ ತಕ್ಕಮುಖ್ಯಸ್ಥರ ಎತ್ತು ಪೋರಾಟ ಸೇವೆಗಳೂ ಸಂಪ್ರದಾಯ ದಂತೆ ನಡೆದವು. ನಂತರ ಭಕ್ತರ ತುಲಾಭಾರ ಸೇವೆಗಳು, ಮಧ್ಯಾಹ್ನದ ಮಹಾಪೂಜೆ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಇಗ್ಗುತ್ತಪ್ಪ ದೇವರ ಉತ್ಸವ ಮೂರ್ತಿಯೊಂದಿಗೆ ಐದು ಕಿ.ಮೀ. ದೂರದ ಆದಿ ಸ್ಥಳ ಮಲ್ಮ ಬೆಟ್ಟಕ್ಕೆ ತೆರಳಲಾಯಿತು.

ಈ ಸಂದರ್ಭದಲ್ಲಿ ಸಮೀಪದ ನೆಲಜಿ ಇಗ್ಗುತ್ತಪ್ಪ ದೇವಾಲಯದ ಹಾಗೂ ಪೇರೂರು ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು, ಗ್ರಾಮಸ್ಥರು, ಭಕ್ತಾದಿಗಳು ಎತ್ತುಪೋರಾಟದೊಂದಿಗೆ ಮಲ್ಮ ಬೆಟ್ಟದಲ್ಲಿ ಹಾಜರಿದ್ದರು. ಮೂರು ಇಗ್ಗುತ್ತಪ್ಪ ದೇವಾಲಯಗಳ ತಕ್ಕ ಮುಖ್ಯಸ್ಥರ

(ಮೊದಲ ಪುಟದಿಂದ) ಉಪಸ್ಥಿತಿಯಲ್ಲಿ ದೈವಿಕ ವಿಧಿವಿಧಾನಗಳು, ದುಡಿಕೊಟ್ಟ್, ಪಾಟ್, ನೈವೇಧ್ಯ, ಪೂಜೆ, ದೇವರ ಬಲಿ, ಹರಕೆ ಸೇವೆಗಳನ್ನು ನೆರವೇರಿಸಿ ದೇವ ಕಟ್ಟನ್ನು ಹಿಂತೆಗೆಯಲಾಯಿತು. ರಾತ್ರಿ ದೇವಾಲಯದಲ್ಲಿ ಉತ್ಸವ ಮೂರ್ತಿಯ ನೃತ್ಯೋತ್ಸವದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊAಡಿತು.

ದೈವಿಕ ವಿಧಿವಿಧಾನಗಳನ್ನು ಅರ್ಚಕರುಗಳಾದ ಕುಶ ಭಟ್, ಜಗದೀಶ್, ಶ್ರೀನಿವಾಸ ಹೆಬ್ಬಾರ್ ಮತ್ತಿತರರು ನೆರವೇರಿಸಿದರು. ಭಕ್ತರಾದ ಪರದಂಡ ವಿಠಲ ಭೀಮಯ್ಯ, ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಿದರು.

ಉತ್ಸವದಲ್ಲಿ ದೇವಳಕ್ಕೆ ಸಂಬAಧಿಸಿದ ಎಲ್ಲಾ ತಕ್ಕಮುಖ್ಯಸ್ಥರು. ಭಕ್ತ ಜನಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ, ಉಪಾಧ್ಯಕ್ಷ ಪರದಂಡ ಡಾಲಿ, ಕಾರ್ಯದರ್ಶಿ ಬೊಳಂದAಡ ಲಲಿತಾ ನಂದಕುಮಾರ್, ಕಾರ್ಯದರ್ಶಿ ನಂಬಡಮAಡ ಸುಬ್ರಮಣಿ, ಎಲ್ಲಾ ನಿರ್ದೇಶಕರು, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಕುಂಜಿಲ- ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ನಂಜುAಡೇಗೌಡ, ನಾಪೋಕ್ಲು ಹೋಬಳಿ ಕಂದಾಯ ಪರೀವೀಕ್ಷಕ ರವಿ ಕುಮಾರ್, ಗ್ರಾಮ ಲೆಕ್ಕಿಗ ಜನಾದÀðನ್, ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ ಮತ್ತಿತರರು ಹಾಜರಿದ್ದರು.

ನೆಲಜಿ ಇಗ್ಗುತ್ತಪ್ಪ ದೇವಳದಲ್ಲಿಯೂ ಉತ್ಸವ

ನೆಲಜಿ ಇಗ್ಗುತ್ತಪ್ಪ ದೇವಾಲಯದಲ್ಲಿಯೂ ಕುಂಬ್ಯಾರು ಕಲಾಡ್ಚ ಉತ್ಸವ ನಡೆಯಿತು. ಈ ಪ್ರಯುಕ್ತ ಎತ್ತು ಪೋರಾಟ, ತುಲಾಭಾರ ಸೇವೆ, ಮಹಾಪೂಜೆ, ದೇವರಬಲಿ, ಅನ್ನಸಂತರ್ಪಣೆ ನಡೆಯಿತು. ಭಕ್ತಾದಿಗಳು ತಾವು ಬೆಳೆದ ಕಾಫಿ, ಕಾಳು ಮೆಣಸು ಮತ್ತಿತರ ವಸ್ತುಗಳನ್ನು ದೇವರ ಸನ್ನಿಧಿಗೆ ಅರ್ಪಿಸಿದರು.

ದೈವಿಕ ವಿಧಿ ವಿಧಾನಗಳನ್ನು ರಮೇಶ್ ಶರ್ಮ, ಸುರೇಶ್ ಶರ್ಮ, ಸಂತೋಷ್ ಹೆಬ್ಬಾರ್ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಳಕ್ಕೆ ಸಂಬAಧಿಸಿದ ಎಲ್ಲಾ ತಕ್ಕಮುಖ್ಯಸ್ಥರು, ಗ್ರಾಮಸ್ಥರು, ಭಕ್ತಾದಿಗಳು ನೆರೆದಿದ್ದರು.