ಕೂಡಿಗೆ, ಮಾ. ೧೫ : ಹಾರಂಗಿ ಅಣೆಕಟ್ಟೆಯಿಂದ ಕಳೆದ ೧೫ ದಿನಗಳಿಂದ ಮುಖ್ಯನಾಲೆ ಸೇರಿದಂತೆ ಬಲದಂಡೆ ಮತ್ತು ಎಡದಂಡೆಯ ನಾಲೆಯ ಮೂಲಕ ಕೊಡಗು ಜಿಲ್ಲೆಯ ಗಡಿಭಾಗ ಸೇರಿದಂತೆ ಮೂರು ಜಿಲ್ಲೆಯ ಕೆರೆಕಟ್ಟೆಗಳು ತುಂಬಲು ಮತ್ತು ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಹಂಗಾಮಿ ಬೆಳೆಗಳಾದ ಹಳಸಂದೆ ಕಾಳುಗಳನ್ನು ಬೆಳೆಯಲು ಕಳೆದ೧೫ ದಿನಗಳಿಂದ ನೀರನ್ನು ಹರಿಸಲಾಗಿತ್ತು. ಇದೀಗ ನೀರಿನ ಮಟ್ಟವನ್ನು ನೋಡಿಕೊಂಡು ಇಂದಿನಿAದ ಅಣೆಕಟ್ಟೆಯಿಂದ ನೀರನ್ನು ಸ್ಥಗಿತಗೊಳಿಸಲಾಗಿದೆ.
ಕಾವೇರಿ ನೀರಾವರಿ ನಿಗಮ ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ ಅಣೆಕಟ್ಟೆಯಿಂದ ಹತ್ತು ದಿನಗಳವರೆಗೆ ನೀರಿನ ಹರಿಯುವಿಕೆಯನ್ನು ಸ್ಥಗಿತಗೊಳಿಸಿ, ನಂತರ ೧೫ ದಿನಗಳವರೆಗೆ ಎರಡನೇ ಹಂತದ ನೀರನ್ನು ಹರಿಸಲಾಗುವುದು ಎಂದು ಹಾರಂಗಿ ನೀರಾವರಿ ಇಲಾಖೆಯ ಇಂಜಿನಿಯರ್ ಸಿದ್ದರಾಜು ತಿಳಿಸಿದ್ದಾರೆ.