ನಾಪೋಕ್ಲು, ಮಾ. ೧೬: ಸಮೀಪದ ಕೊಟ್ಟಮುಡಿ ಬಳಿಯ ಕಾವೇರಿ ಹೊಳೆಯಲ್ಲಿ ಅಪರಿಚಿತ ವ್ಯಕ್ತ್ತಿಯೊಬ್ಬರ ಮೃತ ದೇಹ ಪತ್ತೆಯಾಗಿದೆ. ಹೊಳೆ ಬದಿಯಲ್ಲಿ ಶೂ ಗೋಚರಿಸಿದ್ದು ಇದೊಂದು ಆತ್ಮಹತ್ಯೆ ಆಗಿರಬಹುದು ಎಂದು ಶಂಕಿಸಲಾಗಿದೆ. ನಾಪೋಕ್ಲು ಪೊಲೀಸರು ಸಾರ್ವಜನಿಕರ ಮತ್ತು ಗ್ರಾಮ ಪಂಚಾಯತ್ ಸಹಕಾರದಿಂದ ಮೃತದೇಹವನ್ನು ಹೊಳೆಯಿಂದ ಹೊರ ತೆಗೆದು ಮಡಿಕೇರಿಯ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.