ಮಡಿಕೇರಿ, ಮಾ. ೧೫: ಕಳ್ಳಭಟ್ಟಿ ತಯಾರಿಕೆ ಹಾಗೂ ಮಾರಾಟಕ್ಕೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ೧೮೬೭ ದಾಳಿಗಳನ್ನು ನಡೆಸಿ ಕಾನೂನಾತ್ಮಕ ಕ್ರಮಕೈಗೊಳ್ಳಲಾಗಿದೆ ಎಂದು ಅಧಿವೇಶನದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪ್ರಶ್ನೆಗೆ ಅಬಕಾರಿ ಸಚಿವ ಕೆ. ಗೋಪಾಲಯ್ಯ ಉತ್ತರಿಸಿದರು.
ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಕಳ್ಳಭಟ್ಟಿ ಪ್ರಕರಣಗಳೆಷ್ಟು ಎಂಬ ರಂಜನ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ೨೦೧೯-೨೦ರಲ್ಲಿ ೩೦, ೨೦೨೦-೨೧ರಲ್ಲಿ ೧೫, ೨೦೨೧-೨೨ರ ಫೆಬ್ರವರಿ ಅಂತ್ಯಕ್ಕೆ ೬೬ ಪ್ರಕರಣಗಳು ದಾಖಲಾಗಿವೆ ಎಂದು ಉತ್ತರಿಸಿದರು. ಕಳ್ಳಭಟ್ಟಿ ತಯಾರಿಕೆ, ಮಾರಾಟ ತಡೆಗೆ ಗ್ರಾಮಮಟ್ಟಗಳಲ್ಲಿ ಸಭೆ ನಡೆಸಲಾಗುತ್ತಿದೆ.
(ಮೊದಲ ಪುಟದಿಂದ) ಮೂರು ವರ್ಷಗಳಲ್ಲಿ ೧೩೮ ಸಭೆ ನಡೆಸಲಾಗಿದೆ. ಈ ಹಿಂದೆ ಕಳ್ಳಭಟ್ಟಿ ತಯಾರಿಕೆ ಮತ್ತು ಮಾರಾಟವಾಗುತ್ತಿದ್ದ ಜಾಗ ಗುರುತಿಸಿ ಅವುಗಳ ಮೇಲೆ ನಿಗಾವಹಿಸಲಾಗಿದೆ. ನಿಯಮಿತವಾಗಿ ದಾಳಿಗಳನ್ನು ನಡೆಸಲಾಗುತ್ತಿದೆ. ೯ ಸಣ್ಣಮಟ್ಟದ ಕಳ್ಳಭಟ್ಟಿ ತಯಾರಿಕ ಕೇಂದ್ರಗಳೆAದು ಗುರುತಿಸಿದ್ದು, ಇವುಗಳ ಮೇಲೆ ನಿರಂತರ ದಾಳಿ ನಡೆಸಲಾಗುತ್ತಿದೆ ಎಂದು ಕೆ.ಗೋಪಾಲಯ್ಯ ವಿವರಿಸಿದರು. ಕಳ್ಳಭಟ್ಟಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾಮೂಹಿಕ ದಾಳಿ ನಡೆಸಲಾಗುತ್ತಿದೆ. ತಯಾರಿಕೆಗೆ ಕಚ್ಛಾವಸ್ತು ಒದಗಿಸುವವರ ಮೇಲೆಯೂ ನಿಗಾ ಇಡಲಾಗಿದೆ. ಹಿಂದಿನ ಪ್ರಕರಣಗಳ ಅಪರಾಧಿಗಳ ಚಲನವಲನದ ಮೇಲೂ ನಿಗಾವಹಿಸಲಾಗಿದೆ ಎಂದು ತಿಳಿಸಿದರು.