ಮಡಿಕೇರಿ, ಮಾ. ೧೫; ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯ ಭಾಗಮಂಡಲ ವಲಯ, ತೊಡಿಕಾನ ಉಪ ವಲಯದ ತಣ್ಣಿಮಾನಿಯಲ್ಲಿರುವ ನಿಶಾನೆ ಮೊಟ್ಟೆಯಲ್ಲಿ ನಡೆದ ಅಕ್ರಮ ಹರಳು ಕಲ್ಲು ದಂಧೆ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳ ವಿರುದ್ಧ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದೆ. ಇದರಿಂದಾಗಿ ಮುಚ್ಚಿ ಹೋಗಲಿದ್ದ ಹಳೆಯ ಪ್ರಕರಣಕ್ಕೆ ಜೀವ ಬಂದAತಾಗಿದ್ದು, ಅದಾಗ್ಯೂ ಪ್ರಮುಖ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದು, ಇನ್ನುಳಿದವರು ತಲೆಮರೆಸಿಕೊಂಡಿರುವದಾಗಿ ಹೇಳಲಾಗುತ್ತಿದೆ..!
೨೦೨೦ರಲ್ಲಿ ನಿಶಾನೆ ಮೊಟ್ಟೆಯಲ್ಲಿ ಅಕ್ರಮವಾಗಿ ಹರಳು ಕಲ್ಲು ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ವಿವಿಧ ಕಡೆಗಳಿಗೆ ಧಾಳಿ ಮಾಡಿದ ಅರಣ್ಯ ಇಲಾಖಾ ಅಧಿಕಾರಿಗಳು ಈರ್ವರನ್ನು ಬಂದಿಸಿದ್ದರು. ಮೇಕೇರಿಯ ಸಲೀಂ ಹಾಗೂ ಮಡಿಕೇರಿ ತ್ಯಾಗರಾಜ ಕಾಲೋನಿಯ ಎಂ.ಡಿ.ಷರೀಫ್ ಎಂಬಿಬ್ಬರನ್ನು ಬಂಧಿಸಿ ಬಂದಿತರಿAದ ೪೭.೫೦೪ ಕೆಜಿಯಷ್ಟು ಹರಳು ಕಲ್ಲುಗಳನ್ನು ವಶ ಪಡಿಸಿಕೊಂಡಿದ್ದರು. ಈ ಸಂಬAಧ ಬಂದಿತರು ಸೇರಿದಂತೆ ಎಂಟು ಮಂದಿ ವಿರುದ್ಧ ಮೊಕದ್ದಮೆ ಕೂಡ ದಾಖಲಾಗಿತ್ತು. ಉಳಿದ ಆರು ಮಂದಿ ತಲೆಮರೆಸಿಕೊಂಡಿದ್ದಾರೆ ಎಂದು ವಲಯ ಅರಣ್ಯ ಅಧಿಕಾರಿ ವರದಿ ಸಲ್ಲಿಸಿದ್ದರು. ನಂತರದಲ್ಲಿ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದುಕೊಂಡರಾದರೂ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸದರಿಂದ ಪ್ರಕರಣ ಅಲ್ಲಿಗೆ ಮುಚ್ಚಿ ಹೋಗಿತ್ತು..!
ಮತ್ತೆ ಜೀವ ಪಡೆಯಿತು..!
ಇದಾದ ಬಳಿಕ ೨೦೨೧ರ ಡಿಸೆಂಬರ್ ಅಂತ್ಯದಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ ಆರಂಭಗೊAಡಿರುವ ಬಗ್ಗೆ ‘ಶಕ್ತಿ’ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ಬಗ್ಗೆ ವರದಿ ಪ್ರಕಟಗೊಂಡ ಬಳಿಕ ಕರ್ನಾಟಕ ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಸ್ಥಳಕ್ಕೆ ಅರಣ್ಯಾಧಿಕಾರಿಗಳೊಂದಿಗೆ ಭೇಟಿ ನೀಡಿ ಈ ಬಗ್ಗೆ ತನಿಖೆಗೆ ಸೂಚಿಸಿದ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆದು ಈರ್ವರು ಇಲಾಖಾ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ನಂತರದಲ್ಲಿ ತನಿಖೆ ಕೈಗೊಂಡಾಗ ಮೇಕೇರಿಯ ಸಲೀಂ ಎಂಬಾತನ ಬಳಿ ೨.೬೦೦ ಕೆಜಿ ಹರಳು ಕಲ್ಲು ಸಿಕ್ಕಿದ್ದು ಆತನನ್ನು ಇತ್ತೀಚೆಗೆ ಬಂದಿಸಲಾಗಿದೆ..!
ಇಬ್ಬರು ಹೊಸ ಆರೋಪಿಗಳು..!
ಈ ಪ್ರಕರಣಕ್ಕೆ ಸಂಬAಧಿಸಿದAತೆ ಭಾಗಮಂಡಲ ವಲಯ ಅರಣ್ಯಾಧಿಕಾರಿ ಹೆಚ್.ಜೆ. ದೇವರಾಜು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಬೆಟ್ಟಗೇರಿಯ ರಶೀದ್ (ರಾಶಿ), ಮೇಕೇರಿಯ ಸಲೀಂ, ಮಡಿಕೇರಿಯ ಎಂ.ಡಿ. ಷರೀಫ್, ಎಂ.ಡಿ. ಮಹಮ್ಮದ್, ತಣ್ಣಿಮಾನಿಯ ಮಿಟ್ಟು ರಂಜಿತ್, ಪಾಪು (ಹರೀಶ್), ಪುಟ್ಟ (ಲಕ್ಷö್ಮಣ), ಮಡಿಕೇರಿಯ ಅನಿಲ್‌ಕುಮಾರ್ ಅವರುಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಈ ಪೈಕಿ ಈಗಾಗಲೇ ಬಂಧಿತನಾಗಿರುವ ಸಲೀಂನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಇನ್ನಿಬ್ಬರು
(ಮೊದಲ ಪುಟದಿಂದ) ಪ್ರಮುಖ ಆರೋಪಿಗಳ ಹೆಸರನ್ನು ಬಹಿರಂಗಪಡಿಸಿದ್ದಾನೆ. ದುಬಾಯಿ ನಂದನ ಹಾಗೂ ಆತನ ಪುತ್ರ ದೊರೆಸ್ವಾಮಿ ಅವರುಗಳ ಹೆಸರು ಹೇಳಿದ್ದು, ಅವರುಗಳ ವಿರುದ್ಧವೂ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.
ನಾಲ್ವರಿಂದ ನಿರೀಕ್ಷಣಾ ಜಾಮೀನು..!
ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಲಿದೆ ಎಂಬ ವಿಚಾರ ತಿಳಿಯುತ್ತಲೇ ಪ್ರಮುಖ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದುಕೊಳ್ಳಲು ಮುಂದಾಗಿದ್ದಾರೆ. ಈ ಪೈಕಿ ನಾಲ್ವರಿಗೆ ಜಾಮೀನು ಸಿಕ್ಕಿದೆ. ಈ ಪೈಕಿ ಜಿಲ್ಲಾ ಕೆಡಿಪಿ ಸಮಿತಿ ಸದಸ್ಯನಾಗಿ ನಾಮ ನಿರ್ದೇಶನಗೊಂಡಿರುವ ಮಿಟ್ಟು ರಂಜಿತ್, ರಶೀದ್, ದುಬಾಯಿ ನಂದನ ಹಾಗೂ ದೊರೆಸ್ವಾಮಿ ಅವರುಗಳು ಈಗಾಗಲೇ ಜಾಮೀನು ಪಡೆದುಕೊಂಡಾಗಿದೆ. ಇನ್ನುಳಿದವರು ತಲೆ ಮರೆಸಿಕೊಂಡಿರುವದಾಗಿ ಅರಣ್ಯ ಇಲಾಖಾಧಿಕಾರಿಗಳು ಹೇಳುತ್ತಾರೆ. ಆದರೆ, ಪ್ರಕರಣ ನಡೆದು ಎರಡು ವರ್ಷಗಳಾದರೂ, ಎಲ್ಲರೂ ಸ್ಥಳೀಯವಾಗಿಯೇ ಒಡಾಡಿಕೊಂಡಿದ್ದರೂ ಇನ್ನೂ ಕೂಡ ಬಂಧಿಸಲು ಸಾಧ್ಯವಾಗುತ್ತಿಲ್ಲವೇಕೇ..? ಎಂಬದು ಸಾರ್ವಜನಿಕರ ಪ್ರಶ್ನೆಯಾಗಿದೆ..!?
?ಸಂತೋಷ್, ಸುನಿಲ್