ಮಡಿಕೇರಿ, ಮಾ. ೧೬: ಅರಣ್ಯ ಹಕ್ಕು ಕಾಯ್ದೆಯಡಿ ಜೇನುಕುರುಬರಿಗೆ ಅರಣ್ಯದಲ್ಲಿ ವಾಸಿಸಲು ಅವಕಾಶ ಕಲ್ಪಿಸಬೇಕೆಂಬ ನಿಯಮವಿದ್ದರೂ ಕೆಲ ಅರಣ್ಯ ಅಧಿಕಾರಿಗಳು ತಮ್ಮ ಅರ್ಜಿಗಳನ್ನು ನಿಯಮಬಾಹಿರವಾಗಿ ತಿರಸ್ಕರಿಸುತ್ತಿರುವುದಾಗಿ ಆರೋಪಿಸಿರುವ ಜೇನುಕುರುಬ ಸಮುದಾಯದ ಯುವ ಮುಖಂಡ, ನ್ಯಾಯ ಒದಗಿಸಿಕೊಡಬೇಕಾಗಿ ಅರಣ್ಯ ಹಕ್ಕು ಸಮಿತಿಯ ಜಿಲ್ಲಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಬಿ.ಸಿ. ಸತೀಶ ಅವರಿಗೆ ಮನವಿ ಸಲ್ಲಿಸಿದರು.

ಪೊನ್ನಂಪೇಟೆ ವ್ಯಾಪ್ತಿಯಲ್ಲಿ ವಿವಿಧ ತೋಟಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಂತ ಸೂರಿಲ್ಲದ, ಲೈನ್‌ಮನೆಗಳ ಆಶ್ರಯದಲ್ಲಿರುವ ಜೇನುಕುರುಬರು ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಕರಡಿಕಲ್ಲು ಅತ್ತೂರು ಕೊಲ್ಲಿ ಹಾಡಿಯಲ್ಲಿ ತಮಗೆ ಸ್ವಂತ ಸೂರು ಕಲ್ಪಿಸಬೇಕಾಗಿ ಜಿಲ್ಲಾಧಿಕಾರಿಗಳೊಂದಿಗೆ ಕೋರಿಕೊಂಡರು.

ಯುವ ಮುಖಂಡ ಶಿವು.ಜೆ ಮಾಧ್ಯಮದೊಂದಿಗೆ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಸೆಕ್ಷನ್ ೩೧ ಔ ೪(೨) ಮತ್ತು ೩೧ಇ ಪ್ರಕಾರ ತಮ್ಮ ಪೂರ್ವಿಕರು ಇದ್ದಂತಹ ಸ್ಥಳಗಳಲ್ಲಿ ಕಾನೂನುಬದ್ಧವಾಗಿ ವಸತಿ ಕಲ್ಪಿಸಲು ಅವಕಾಶವಿದೆ. ೨೦೦೫ ಡಿಸೆಂಬರ್ ೧೩ರ ಹಿಂದೆ ಸಮುದಾಯದವರನ್ನು ಅರಣ್ಯ ಪ್ರದೇಶದಿಂದ ಹೊರಹಾಕಲಾಗಿತ್ತು. ವನ್ಯಜೀವಿ ಸಂರಕ್ಷಣೆ, ರಾಷ್ಟಿçÃಯ ಉದ್ಯಾನವನ ಘೋಷಣೆಗಳಿಂದಾಗಿ ತಮ್ಮನ್ನು ಹೊರಹಾಕಲಾಯಿತು.

ಈ ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸುವಂತೆ ೨೦೦೬ನಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಸಮುದಾಯದವರನ್ನು ಹೊರ ಹಾಕಲ್ಪಟ್ಟ ಸ್ಥಳದಲ್ಲೇ ಜೇನುಕುರುಬರಿಗೆ ಮತ್ತೆ ವಾಸಿಸಲು ಅವಕಾಶ ಕಲ್ಪಸಬೇಕೆಂಬ ನಿಯಮವಿದೆ. ಈ ಸಂಬAಧ ಅತ್ತೂರು ಕೊಲ್ಲಿ ಹಾಡಿಯಲ್ಲಿ ಸುಮಾರು ೪೩ ಕುಟುಂಬಗಳು ವಾಸಿಸುವ ಸಲುವಾಗಿ ಸಂಬAಧಿಸಿದ ಸಾಕ್ಷö್ಯಗಳನ್ನು ಒದಗಿಸಿ ಅರ್ಜಿ ಹಾಕಿದ್ದು, ಗ್ರಾಮಸಭೆಯಲ್ಲಿ ಇದು ಪರಿಶೀಲನೆಗೊಂಡು ಉಪ ವಿಭಾಗಮಟ್ಟದ ಅರಣ್ಯ ಹಕ್ಕು ಸಮಿತಿಗೆ ಮುಂದಿನ ಕ್ರಮಕ್ಕಾಗಿ ಕಳಿಸಲಾಗಿತ್ತು. ಆದರೆ ಇಲ್ಲಿ ಕೆಲವು ಅಧಿಕಾರಿಗಳು ಕಾನೂನು ಬಾಹಿರವಾಗಿ ಅರ್ಜಿಗಳನ್ನು ತಿರಸ್ಕರಿಸಿ ಸಮುದಾಯದವರನ್ನು ನಿರ್ನಾಮ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಕಾನೂನಿನಡಿಯಲ್ಲಿ ನಿಯಮ ೧೩-೧ಏ ಯಿಂದ I ತನಕ ಯಾವುದಾದರೂ ೨ ಸಾಕ್ಷö್ಯಗಳನ್ನು ಒದಗಿಸಬೇಕೆಂಬ ನಿಯಮವಿದ್ದರೂ, ಅಧಿಕಾರಿಗಳು ದಾಖಲೆಗಳನ್ನು ನೀಡಲೇಬೇಕೆಂಬ ಕಾನೂನು ಬಾಹಿರ ಕ್ರಮವನ್ನು ಪಾಲಿಸುತ್ತಿದ್ದು ಸಮುದಾಯದವರನ್ನು ಅತಂತ್ರಗೊಳಿಸಲು ಪ್ರಯತ್ನಿಸು ತ್ತಿರುವುದಾಗಿ ಆರೋಪಿಸಿದರು.