ನಾಪೋಕ್ಲು, ಮಾ. ೧೫: ಪಿ & ಜಿ ಕ್ರಿಯೇಷÀನ್ ನಿರ್ಮಾಣದ ಅಚ್ಚೆಯಡ ಗಗನ್ ಗಣಪತಿ ಮತ್ತು ಬಾಳೆಯಡ ಪ್ರತೀಶ್ ಪೂವಯ್ಯನವರ ನಿರ್ದೇಶನದ ಪಟ್ಟಡ ರೀನಾ ಪ್ರಕಾಶ್ ನಿರ್ಮಾಣದ ಕೊಡವ ಚಲನಚಿತ್ರ ‘ಕಲ್ಲಕೆರೆ ಮಾದೇವಿ’ ಚಿತ್ರೀಕರಣ ಪೂರ್ಣವಾಗಿ ಮುಕ್ತಾಯಗೊಂಡಿದ್ದು ತೆರೆಗೆ ಬರಲು ಸಿದ್ಧವಾಗಿದೆ. ಈ ಹಿನ್ನೆಲೆ ಇದರ ಅಭಿನಂದನಾ ಸಮಾರಂಭ ಚೆಯ್ಯಂಡಾಣೆಯ ಕೊಡವ ಸಮಾಜದಲ್ಲಿ ನಡೆಯಿತು.
ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಇಂದು ಕೊಡವ ಸಂಸ್ಕೃತಿ ವಿನಾಶದ ಅಂಚಿಗೆ ತಲುಪಿದ್ದು, ಯುವಜನತೆ ಇದನ್ನು ಉಳಿಸುವ ಸಲುವಾಗಿ ಇಂತಹ ಚಲನಚಿತ್ರವನ್ನು ತಯಾರಿಸಿ ತಂದು ಸಂಸ್ಕೃತಿಯನ್ನು ಬಿಂಬಿಸುತ್ತಿರುವುದು ಶ್ಲಾಘನೀಯ. ಸಂಸ್ಕೃತಿ ಉಳಿಯಬೇಕಾದರೆ ಮೊದಲು ನಮ್ಮ ಭಾಷೆಗೆ ಆದÀ್ಯತೆಯನ್ನು ನೀಡಬೇಕು ಎಂದರು.
ಚೆಯ್ಯಂಡಾಣೆ ಕೊಡವ ಸಮಾಜದ ಅಧ್ಯಕ್ಷ ಮುಂಡ್ಯೋಳAಡ ಬಿದ್ದಪ್ಪ ಮಾತನಾಡಿ, ಚಿತ್ರದಲ್ಲಿ ಪದ್ಧತಿ ಸಂಸ್ಕೃತಿಯನ್ನು ಅಳವಡಿಸಿರುವುದರಿಂದ ನಮ್ಮ ಜನಾಂಗದ ಯುವಪೀಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂದರು. ಚೆಯ್ಯಂಡಾಣೆ ಕೊಡವ ಸಮಾಜದ ಕಾರ್ಯದರ್ಶಿ ಚೇನಂಡ ಜಪ್ಪು, ಚೇನಂಡ ಸುರೇಶ್, ತಾತಂಡ ಪ್ರಭಾ ನಾಣಯ್ಯ, ಚೆರುವಾಳಂಡ ಸುಜಲಾ ಕಾರ್ಯಕ್ರಮದಲ್ಲಿ ಮಾತನಾಡಿ ಶುಭ ಹಾರೈಸಿದರು.
ಈ ಚಲನ ಚಿತ್ರದ ಸಂಭಾಷಣೆಯನ್ನು ಅಮ್ಮಣಿಚಂಡ ಪ್ರವೀಣ್ ಚಂಗಪ್ಪÀ್ಪ ಬರೆದಿದ್ದು, ಕಲ್ಲಕೆರೆ ಮಾದೇವಿ ಪಾತ್ರದಲ್ಲಿ ದೆಸ್ನಾ ದೇಚಮ್ಮ ಮೊದಲ ಬಾರಿಗೆ ನಟಿಸಿದ್ದಾರೆ. ಚೆರುವಾಳಂಡ ರಾಕೇಶ್ ರಾಜ ಅಪ್ಪಯ್ಯ ಪಾತ್ರವನ್ನು ನಿರ್ವಹಿಸಿದ್ದು ಉಳಿದಂತೆ ಮುಂಡಾಚಾಡೀರ ರಿನ್ನಿ ಭರತ್, ಕೊಂಗAಡ ಪವನ್, ಚೇನಂಡ ಸುರೇಶ್, ಚೇನಂಡ ಗಿರೀಶ್, ಮುಂಡ್ಯೋಳAಡ ದಿನು ಮತ್ತಿತರರು ನಟಿಸಿದ್ದಾರೆ. ಮೈಸೂರಿನ ನಿಲ್ರಾಜ್ ಛಾಯಾಗ್ರಹಣ, ಮೇಕಪ್ ಮೆನ್ ಆಗಿ ಪ್ರಕಾಶ್, ಕಲಾ ನಿರ್ದೇಶಕರಾಗಿ ವೀರಾಜಪೇಟೆಯ ಸಾಧಿಕ್, ವಸ್ತçವಿನ್ಯಾಸ ಮಲ್ಲಮಾಡ ಶ್ಯಾಮಾಲಾ ಮಾಡಿದ್ದು, ಚಿತ್ರಕ್ಕೆ ಪೊನ್ನಂಪೇಟೆಯ ಉಮೇಶ್, ತೇಲಪಂಡ ಶಿವಕುಮಾರ್ ಅಪ್ಪಚೇಟ್ಟೋಳಂಡ ಮನು ಮುತ್ತಪ್ಪ, ಮಂಡೇಪAಡ ಸುನೀಲ್ ಸುಬ್ರಮಣಿ ಮತ್ತಿತರರು ಆರ್ಥಿಕವಾಗಿ ನೆರವನ್ನು ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಪಿ & ಜಿ ಕ್ರಿಯೇಷನ್ ಸಂಸ್ಥೆಯ ಅಚ್ಚೆಯಡ ಗಗನ್ ಗಣಪತಿ, ಬಾಳೆಯಡ ಪ್ರತೀಶ್ ಪೂವಯ್ಯ, ನಿರ್ಮಾಪಕಿ ಪಟ್ಟಡ ರೀನಾ ಪ್ರಕಾಶ್ ಇದ್ದರು.
-ದುಗ್ಗಳ