ಮಡಿಕೇರಿ, ಮಾ. ೧೫: ಕುಶಾಲನಗರ ಸರಕಾರಿ ಇಂಜಿನಿಯರಿAಗ್ ಕಾಲೇಜಿನ ಬಳಿ ‘ಫಿಶ್ ಕರಿ ರೈಸ್’ ಹೊಟೇಲ್ ಒಂದರಿAದ ಕಲುಷಿತ ನೀರು ನೇರವಾಗಿ ಕಾವೇರಿ ನದಿಗೆ ಸೇರುತ್ತಿದ್ದರೂ, ಸಂಬAಧಿಸಿದವರು ಜಾಣ ಮೌನ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ಹೊಟೇಲ್ನಿಂದ ನೇರವಾಗಿ ಗಬ್ಬೆದ್ದು ನಾರುತ್ತಿರುವ ಕೊಳಚೆ ನೀರು ಹೊಳೆಗೆ ಸೇರುತ್ತಿದೆ.
ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಸಂಬAಧಿಸಿದ ಗುಡ್ಡೆಹೊಸೂರು ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯಿತಿಯ ಸದಸ್ಯರಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದಾಗಿ ಆರೋಪಿಸಿರುವ ಗ್ರಾಮಸ್ಥರು ತಕ್ಷಣವೇ ಹೊಟೇಲ್ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಹೊಳೆ ಕಲುಷಿತಗೊಳ್ಳುವುದನ್ನು ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
-ಟಿ.ಜಿ. ಸತೀಶ್