ಕರ್ನಾಟಕದಾದ್ಯಂತ ಇಂದಿನಿAದ ಪುನೀತ್ ರಾಜ್ ಕುಮಾರ್ ಉತ್ಸವ.. ಇಂದು ಪುನೀತ್ ಬದುಕಿದ್ದರೆ ೪೭ ವರ್ಷದ ಸಂಭ್ರಮ ಮನೆಮಂದಿಯಲ್ಲಿರುತ್ತಿತ್ತು. ಆದರೆ, ಕಳೆದ ಅಕ್ಟೋಬರ್ ೨೯ ರಂದು ಹೃದಯ ಸ್ತಂಭನದಿAದಾಗಿ ಪುನೀತ್ ಎಂಬ ಕನ್ನಡ ಸಿನಿಮಾ ರಸಿಕರ ಆರಾಧ್ಯ ದೈವದಂತಿದ್ದ ಪುನೀತ್ ಇಹಲೋಕದಿಂದ ನಿರ್ಗಮಿಸಿಯೇ ಬಿಟ್ಟರು.
ಯಾರೂ ಶಾಶ್ವತರಲ್ಲ. ಯಾರೂ ಚಿರಂಜೀವಿಯಲ್ಲ. ಅದೆಷ್ಟೋ ಮಹಾನ್ ವ್ಯಕ್ತಿಗಳು, ಸಾಧಕರು, ಗಣ್ಯರು ಇಳಿಪ್ರಾಯದಲ್ಲಿಯೇ ಈ ಲೋಕದಿಂದ ನಿರ್ಗಮಿಸಿದ್ದಾರೆ. ಇನ್ನೂ ಇರಬೇಕಾಗಿತ್ತು ಎಂದುಕೊಳ್ಳುವಾಗಲೇ ಕೊನೆ ಉಸಿರು ಎಳೆದು ಬಾರದ ಲೋಕಕ್ಕೆ ಸಾಗಿಬಿಟ್ಟಿದ್ದಾರೆ.
ಪುನೀತ್ ಸಾವು ಕೂಡ ಹೀಗೆಯೇ ಎಂದು ಸಮಧಾನ ಪಟ್ಟುಕೊಳ್ಳಬಹುದು. ಆದರೆ, ಇಲ್ಲಿ ಗಮನಿಸಬೇಕಾದದ್ದು ಪುನೀತ್ ಸಾವಿನ ನಂತರ ಈ ಸಮಾಜದಲ್ಲಿ ಕಂಡು ಬಂದ ಅದ್ಭುತ ಪ್ರತಿಕ್ರಿಯೆ ಅಥವಾ ಪರಿವರ್ತನೆ. ಬಹುಷಃ ಕರ್ನಾಟಕದಲ್ಲಿ ಮಾತ್ರ ಅಲ್ಲ, ಭಾರತದಲ್ಲಿಯೇ ಬೇರೆ ಯಾರಿಗೂ ಇಂಥ ಉತ್ತಮ ಸ್ಪಂದನ ಸಾವಿನ ನಂತರ ಜನಸಾಮಾನ್ಯರಿಂದ ದೊರಕಿದ ಉದಾಹರಣೆ ಕಡಿಮೆ.
ಗಮನಿಸಿ ನೋಡಿ. ಪುನೀತ್ ನಿಧನದ ಸುದ್ದಿ ಕೇಳಿಯೇ ಎರಡೇ ದಿನಗಳಲ್ಲಿ ಹೃದಯಾಘಾತ, ಆತ್ಮಹತ್ಯೆಗಳ ಮೂಲಕ ರಾಜ್ಯದಲ್ಲಿ ಸಾವಿನ್ನಪ್ಪಿದವರ ಸಂಖ್ಯೆ ೨೧. ಪುನೀತ್ ಅಂತ್ಯಕ್ರಿಯೆ ಸಂದರ್ಭದ ಮೆರವಣಿಗೆ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿಯೇ ಸಾಧಕನೋರ್ವನ ಸಾವಿನ ಸಂದರ್ಭ ಸೇರಿದ ಅತ್ಯಧಿಕ ಜನಸ್ತೋಮ ಎಂಬುದಕ್ಕೆ ಉದಾಹರಣೆಯಾಯಿತು. ಕನ್ನಡದ ವರನಟ ಸಾವನ್ನಪ್ಪಿದ ಸಂದರ್ಭ ಅದೆಷ್ಟು ಅನಾಹುತ, ದೊಂಬಿಗಳು ಸಂಭವಿಸಿತು ಎಂಬುದನ್ನು ಮೆಲಕು ಹಾಕಿದರೆ ರಾಜ್ ಪುತ್ರ ಪುನೀತ್ ಅಂತ್ಯಕ್ರಿಯೆ ಸಂದರ್ಭ ಅಭಿಮಾನಿಗಳು ಅದೆಷ್ಟು ತಾಳ್ಮೆಯಿಂದ ವರ್ತಿಸಿದ್ದರು ಎಂಬುದನ್ನು ಊಹಿಸಿಕೊಂಡರೇ ಮನಸ್ಸು ¸ಮಾಧಾನಗೊಳ್ಳುತ್ತದೆ. ರಾಜ್ ಸದಾ ಹೇಳುತ್ತಿದ್ದ ಅಭಿಮಾನಿ ದೇವರುಗಳು ಎಂಬ ಪದ ಪುನೀತ್ ವಿಚಾರದಲ್ಲಿ ನಿಜವಾಗಿತ್ತು. ಅಭಿಮಾನಿಗಳು ದೇವರಂತೆ ವರ್ತಿಸಿದರು.
ಪುನೀತ್ ಅಂತ್ಯಕ್ರಿಯೆ ಸಂದರ್ಭ ಮಾತ್ರವಲ್ಲ. ಪುನೀತ್ ಅಗಲಿಕೆಯ ನಂತರದ ದಿನಗಳಲ್ಲಿಯೂ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿಯೂ ಪುನೀತ್ ಆರಾಧನೆ ನಡೆಯಿತು. ರಸ್ತೆಗಳಿಗೆ, ಬೀದಿಗಳಿಗೆ ಪುನೀತ್ ಹೆಸರನ್ನು ಇಡಲಾಯಿತು. ಕಟ್ಟಡ, ಅಂಗಡಿಗಳಿಗೆ ಪುನೀತ್ ಎಂಬ ಹೆಸರಿನ ಫಲಕ ಕಂಗೊಳಿಸಿತು. ಪುನೀತ್ ಪ್ರತಿಮೆಗಳು ರಾಜ್ಯವ್ಯಾಪಿ ರಾರಾಜಿಸಿದವು. ಪುನೀತ್ ಸ್ಮರಣಾರ್ಥ ಗ್ರಾಮಗ್ರಾಮಗಳಲ್ಲಿ, ನಗರದ ಗಲ್ಲಿಗಲ್ಲಿಗಳಲ್ಲಿ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ಆಯೋಜಿತವಾಯಿತು.
ಪುನೀತ್ ಹೆಸರಿನಲ್ಲಿ ಅಭಿಮಾನಿಗಳು ನೇತ್ರದಾನ ಮಾಡಿದರು. ನಾರಾಯಣ ನೇತ್ರಾಲಯದ ವೈದ್ಯರ ಪ್ರಕಾರ, ಕಳೆದ ೫ ತಿಂಗಳಲ್ಲಿ ಪುನೀತ್ ಸ್ಮರಣೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಕಣ್ಣು ದಾನ ಮಾಡಲು ಹೆಸರು ನೋಂದಾಯಿಸಿದ್ದಾರೆ. ಇದೊಂದು ಅಚ್ಚರಿಯೇ ಹೌದು. ಯಾವುದೇ ಸಂದೇಶ, ಕೋರಿಕೆ ಮನವಿಗಳಿಗೆ ಸ್ಪಂದಿಸದ ಜನ ಪುನೀತ್ಗಾಗಿ ತಮ್ಮ ಕಣ್ಣನ್ನು ಮರಣದ ನಂತರ ದಾನ ಮಾಡಲು ಮುಂದಾಗಿದ್ದಾರೆ. ಪುನೀತ್ ಹೆಸರಿನಲ್ಲಿ ಎಲ್ಲೆಡೆ ಆರೋಗ್ಯ ಚಿಕಿತ್ಸಾ ಶಿಬಿರಗಳು ಜರುಗಿದವು. ಕ್ರೀಡಾಕೂಟಗಳು ಆಯೋಜಿಸಲ್ಪಟ್ಟವು. ಪುನೀತ್ ನೆನಪಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಮಡಿಕೇರಿಯಲ್ಲಿಯೂ ಪ್ರಥಮ ಬಾರಿಗೆ ನಟನೋರ್ವನ ಕಟ್ ಔಟ್, ಪೋಸ್ಟರ್ ಗಳು ಶ್ರದ್ಧಾಂಜಲಿ ರೂಪದಲ್ಲಿ ಪುನೀತ್ ಮೂಲಕ ಕಂಡುಬAತು. ಕೊಡಗಿನ ಅನೇಕ ಊರುಗಳಲ್ಲಿಯೂ ಪುನೀತ್ ಫೋಟೋಕ್ಕೆ ಅಭಿಮಾನಿಗಳು ಹೂಹಾರ ಹಾಕಿ ಶೋಕದ ವಿದಾಯ ಹೇಳಿದರು.
ಅಂದರೆ ಕನ್ನಡಿಗರು ಮನಪೂರ್ವಕವಾಗಿ ಪುನೀತ್ನನ್ನು ಆರಾಧಿಸಿದರು. ಓರ್ವ ನಟನಿಗೆ ಆತನ ಮರಣಾನಂತರವೂ ವಿವಿಧ ರೀತಿಯಲ್ಲಿ ತಮ್ಮ ಗೌರವ ಸೂಚಿಸಿದರು.
ಅಚ್ಚರಿಯ ವಿಚಾರ ಏನೆಂದರೆ, ಪುನೀತ್ ನಟನೆಯ ಒಂದೇ ಒಂದು ಸಿನಿಮಾ ನೋಡದವರು, ಪುನೀತ್ ಪರಿಚಯವೇ ಇಲ್ಲದವರು, ಪುನೀತ್ ಅಭಿಮಾನಿಯೇ ಅಲ್ಲದವರು ಕೂಡ ಪುನೀತ್ ಮರಣಾನಂತರ ಆತನ ಅಗಲಿಕೆಗಾಗಿ ಶೋಕ ವ್ಯಕ್ತಪಡಿಸಿದರು. ಪುನೀತ್ ಅಗಲಿಕೆಯನ್ನು ಸಮಾಜಕ್ಕಾದ, ಸಿನಿಮಾರಂಗಕ್ಕೆ ಆದ ನಷ್ಟ ಎನ್ನುವುದಕ್ಕಿಂತ ಹೆಚ್ಚಾಗಿ ತಮ್ಮ ಮನಸ್ಸಿಗೇ ಆದ ನಷ್ಟ ಎಂಬAತೆ ಬಹುತೇಕರು ವಿಷಾಧಿಸಿದರು.
ಇಂಥ ಮೋಡಿಯನ್ನು, ಇಂಥ ವಿಸ್ಮಯವನ್ನು ಭಾರತದಲ್ಲಿ ಜನರ ಮನಸ್ಸಿನ ಮೇಲೆ ಮೂಡಿಸಿದ ಮತ್ತೋರ್ವ ಕಲಾವಿದ ಇಲ್ಲ ಮತ್ತೋರ್ವ ಸಾಧಕನೂ ಇಲ್ಲ. ಪುನೀತ್ ನಿಧನರಾದ ಬಳಿಕವೇ ಅನೇಕರಿಗೆ ಪುನೀತ್ ಮಾಡುತ್ತಿದ್ದ ಅನೇಕ ಸಮಾಜ ಸೇವಾ ಕಾರ್ಯಗಳು ತಿಳಿದದ್ದು. ಪುನೀತ್ ಇಷ್ಟೆಲ್ಲಾ ಕೆಲಸ ಸಮಾಜಕ್ಕಾಗಿ ಮಾಡಿದ್ದರಾ ಎಂದು ಹೆಮ್ಮೆಯಿಂದ ಗುಣಗಾನ ಮಾಡಿದವರ ಸಂಖ್ಯೆಗೆ ಲೆಕ್ಕವಿಲ್ಲ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿನ ಪುನೀತ್ ಸಮಾಧಿ ಸ್ಥಳ ಇಂದಿಗೂ ಕಿಕ್ಕಿರಿದಿದೆ. ಬೆಳ್ಳಂಬೆಳಗ್ಗೆಯೇ ಸಮಾಧಿ ಸ್ಥಳ ವೀಕ್ಷಿಸಲು ಯಾವುದೇ ಪ್ರವಾಸಿ ತಾಣಕ್ಕೆ ಕಡಿಮೆ ಇಲ್ಲದಂತೆ ಸಂದರ್ಶಕರು ಸರದಿ ಸಾಲಿನಲ್ಲಿ ಬರುತ್ತಿದ್ದಾರೆ. ಪುನೀತ್ ಕಣ್ಮರೆಯಾಗಿ ೧೨೫ ದಿನಗಳು ಕಳೆದರೂ ಸಮಾಧಿ ಸ್ಥಳದ ವ್ಯಾಪ್ತಿಯಲ್ಲಿ ಜನರ ಸಂಖ್ಯೆ ಕ್ಷೀಣಗೊಂಡಿಲ್ಲ.
ಪವರ್ ಸ್ಟಾರ್ ಅಥವಾ ಪ್ರೀತಿಯ ಅಪ್ಪುವಿನ ಕೊನೇ ಸಿನಿಮಾ ಜೇಮ್ಸ್ ಇಂದು ತೆರೆಕಾಣುತ್ತಿದೆ. ರಾಜ್ಯದ ಎಲ್ಲಾ ಚಿತ್ರಮಂದಿರದಲ್ಲಿಯೂ ಜೇಮ್ಸ್ ಪ್ರದರ್ಶನಗೊಳ್ಳುತ್ತಿದೆ. ಜೇಮ್ಸ್ ಗಾಗಿ ಅನೇಕ ಚಿತ್ರಮಂದಿರಗಳಲ್ಲಿ ಬಹು ಯಶಸ್ವಿಯಾದ ಕಾಶ್ಮೀರಿ ಪೈಲ್ಸ್ ಪ್ರದರ್ಶನದಿಂದ ತೆಗೆಯಲಾಗಿದೆ. ದೇಶವ್ಯಾಪಿ ೪ ಸಾವಿರ ಚಿತ್ರಮಂದಿರಗಳಲ್ಲಿ ಜೇಮ್ಸ್ ತೆರೆಗೆ ಬರುತ್ತಿದೆ. ಕರ್ನಾಟಕದಲ್ಲಿನ ೫೨೦ ಚಿತ್ರಮಂದಿರಗಳ ಪೈಕಿ ೪೦೦ ಸಿನಿಮಾಮಂದಿರಗಳಲ್ಲಿ ಜೇಮ್ಸ್ ಪ್ರದರ್ಶಿತವಾಗುತ್ತಿದೆ. ಜೇಮ್ಸ್ ಅಬ್ಬರ ಏನಿಲ್ಲ ಎಂದರೂ ಇನ್ನೊಂದು ತಿಂಗಳು ರಾಜ್ಯದಲ್ಲಿ ಇರಲಿದೆ. ಒಟ್ಟು ೫ ಭಾಷೆಗಳಲ್ಲಿ ತೆರೆಕಾಣುತ್ತಿರುವ ಜೇಮ್ಸ್ ಈಗಾಗಲೇ ಬಹಳ ನಿರೀಕ್ಷೆಯನ್ನು ಹುಟ್ಟುಹಾಕಿದೆ. ರಾಜ್ಯವ್ಯಾಪಿ ಜೇಮ್ಸ್ ಚಿತ್ರದ ಬಿಡುಗಡೆ ಹಬ್ಬದಂತೆ ನಡೆಯುತ್ತಿದೆ. ಚಿತ್ರಮಂದಿರಗಳಲ್ಲಿ ಈಗಾಗಲೇ ಜಾತ್ರೆ ರೀತಿಯ ಕಾರ್ಯಕ್ರಮಗಳಿಗೆ ಸಿದ್ಧತೆಯಾಗಿದೆ. -ಅನಿಲ್ ಎಚ್.ಟಿ.