ಶನಿವಾರಸಂತೆ, ಮಾ. ೧೪: ಇಂದಿನ ವೈಜ್ಞಾನಿಕ ಕಾಲದ ಭರಾಟೆಯಲ್ಲಿ ಜನಪದ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಯುವ ಸಮಾಜ ಎಚ್ಚೆತ್ತುಕೊಂಡು ಜನಪದ ಉಳಿಸುವ ಪಣ ತೊಡಬೇಕು ಎಂದು ಮೈಸೂರಿನ ಜನಪದ ಗಾಯಕ ಹಾಗೂ ಸಂಗೀತ ನಿರ್ದೇಶಕ ದೇವಾನಂದ್ ವರಪ್ರಸಾದ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆಯ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಜನಪದ ಮತ್ತು ಯುವಜನತೆ ವಿಷಯದ ಬಗ್ಗೆ ಅವರು ಮಾತನಾಡಿದರು.

ವಿದ್ಯಾಸಂಸ್ಥೆ ಪದಾಧಿಕಾರಿಗಳಾದ ಬಿ.ಕೆ. ಚಿಣ್ಣಪ್ಪ, ಉತ್ತಪ್ಪ, ಪ್ರಾಂಶುಪಾಲ ಈ.ಎಂ. ದಯಾನಂದ್, ಶಿಬಿರಾಧಿಕಾರಿ ಎಂ.ಎನ್. ಹರೀಶ್, ಸಹ ನಿರ್ದೇಶಕ ಬಿ.ಎಂ. ಪೊನ್ನಪ್ಪ, ಶಿಕ್ಷಕಿ ಮಮತಾ ಹಾಜರಿದ್ದರು.