*ಗೋಣಿಕೊಪ್ಪಲು, ಮಾ. ೧೪: ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಜವಾಬ್ದಾರಿಯುತ ನಿಲುವನ್ನು ತಾಳುವ ಮೂಲಕ ಮಕ್ಕಳ ಜೀವನ ರೂಪಿಸಲು ಪ್ರಯತ್ನಿಸಬೇಕು ಎಂದು ಗೋಣಿಕೊಪ್ಪ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೃಷ್ಣಚೈತನ್ಯ ಸಲಹೆ ನೀಡಿದರು.
ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಪೋಷಕ, ಅಧ್ಯಾಪಕರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮೊಬೈಲ್ ಬಳಕೆಯಿಂದ ಮಕ್ಕಳು ಒಳ್ಳೆಯದಕ್ಕಿಂತ ಕೆಟ್ಟ ವಿಷಯಗಳ ಕಡೆ ಗಮನಹರಿಸುವುದೇ ಹೆಚ್ಚು. ಆದ್ದರಿಂದ ಪೋಷಕರು ಮನೆಯಲ್ಲಿ ತಮ್ಮ ಮಕ್ಕಳ ಮೇಲೆ ನಿಗಾವಹಿಸು ವುದು ಸೂಕ್ತ ಎಂದು ಕರೆ ನೀಡಿದರು. ತರಗತಿ ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳಿಗೆ ಗುರುತಿನ ಫಲಕ ವಿತರಿಸಲಾಯಿತು. ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಉದಯೋನ್ಮುಖ ಗಾಯಕ ಅನ್ವಿತ್ ಕುಮಾರ್ನನ್ನು ಸನ್ಮಾನಿಸ ಲಾಯಿತು. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಷಕ- ಅಧ್ಯಾಪಕ ಸಂಘದ ಕಾರ್ಯದರ್ಶಿ ಸುಮತಿನಾಯಕ್, ಪೋಷಕ-ಅಧ್ಯಾಪಕ ಸಂಘದ ಸಂಚಾಲಕÀ ಎಸ್.ಆರ್. ತಿರುಮಲಯ್ಯ, ಸದಸ್ಯೆ ಪೂವಮ್ಮ ಎಂ.ಬಿ, ಪದ್ಮ ಎಂ.ಕೆ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕÀ ಕುಸುಮ್ ಕೆ.ಎಂ. ಮತ್ತು ಪೋಷಕರು ಇದ್ದರು.