ಗೋಣಿಕೊಪ್ಪಲು, ಮಾ. ೧೪ : ಕಾವೇರಿ ಪದವಿಪೂರ್ವ ಕಾಲೇಜು, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಗೋಣಿಕೊಪ್ಪಲು ಇವರುಗಳ ಸಂಯುಕ್ತಾಶ್ರಯದಲ್ಲಿ ಕ್ಷಯರೋಗ ನಿರ್ಮೂಲನೆ ಕುರಿತ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷಯ ರೋಗ ನಿರ್ಮೂಲನಾ ಮೇಲ್ವಿಚಾರಕರುಗಳಾದ ವಿನಿಲ್ ಕೆ.ಬಿ., ಪ್ರದೀಪ್ ಬಿ.ಜಿ. ಹಾಗೂ ಮಂಜು ಅವರುಗಳು ವಿದ್ಯಾರ್ಥಿಗಳಿಗೆ ಕ್ಷಯ ರೋಗ ಹೇಗೆ ಹರಡುತ್ತದೆ? ಅದನ್ನು ತಡೆಗಟ್ಟುವ ಕ್ರಮಗಳೇನು ? ಕ್ಷಯ ರೋಗಿಗಳ ಆರೈಕೆ ಹೇಗೆ ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಕ್ಷಯ ರೋಗ ಕುರಿತ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸಾರಿಕ ಸಿ.ಎಸ್. ಪ್ರಥಮ ಸ್ಥಾನ, ಭೂಮಿಕ ಎಚ್.ಎನ್. ದ್ವಿತೀಯ ಸ್ಥಾನ ಹಾಗೂ ಯಶವಂತ್ ಮುತ್ತಣ್ಣ ಬಿ.ಡಿ. ತೃತೀಯ ಸ್ಥಾನವನ್ನು ಪಡೆದುಕೊಂಡರು. ಕನ್ನಡ ಉಪನ್ಯಾಸಕಿ ಪದ್ಮ ಈ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟಿçÃಯ ಸೇವಾ ಯೋಜನಾಧಿಕಾರಿ ಕುಸುಮ್ ಕಾರ್ಯಾಗಾರವನ್ನು ಆಯೋಜಿಸಿದ್ದರು.