ಮಡಿಕೇರಿ, ಮಾ. ೧೪: ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ತಾ. ೧೭ ರಂದು ಕುಂಬ್ಯಾರು ಕಲಾಡ್ಚ (ವಾರ್ಷಿಕ ಹಬ್ಬ) ಪೂಜಾ ಕಾರ್ಯಕ್ರಮ ನಡೆಯಲಿದೆ.

ತಾ. ೧೭ ರಂದು ಬೆಳಿಗ್ಗೆ ೫.೩೦ ಗಂಟೆಗೆ ಅಭಿಷೇಕ ಪೂಜೆ, ಬೆಳಿಗ್ಗೆ ೬ ಗಂಟೆಗೆ ಪ್ರಾತಃಕಾಲದ ಪೂಜೆ, ಬೆಳಿಗ್ಗೆ ೧೦ ಗಂಟೆಗೆ ಎತ್ತು ಪೋರಾಟ, ಬೆಳಗ್ಗೆ ೧೦.೩೦ ಗಂಟೆಗೆ ತುಲಾಭಾರ ಸೇವೆ, ಬೆಳಿಗ್ಗೆ ೧೧ ಗಂಟೆಗೆ ಭಕ್ತಾಧಿಗಳ ಸೇವಾ ಪೂಜೆ, ಮಧ್ಯಾಹ್ನ ೧೨.೩೦ ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ ೧ ಗಂಟೆಗೆ ಅನ್ನ ಸಂತರ್ಪಣೆ, ಮಧ್ಯಾಹ್ನ ೨ ಗಂಟೆಗೆ ದೇವರು ಹೊರಗೆ ಬಂದು ಮಲ್ಮಕ್ಕೆ ತೆರಳುವುದು, ಸಂಜೆ ೬ ಗಂಟೆಗೆ ದೇವರು ಮಲ್ಮದಿಂದ ಬಂದು ದೇವರ ಬಲಿ ನೃತ್ಯ ನಡೆಯಲಿದೆ ಎಂದು ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಆರ್. ರವಿಕುಮಾರ್ ತಿಳಿಸಿದ್ದಾರೆ.