ಮಡಿಕೇರಿ, ಮಾ. ೧೪: ಲಯನ್ಸ್ ಜಿಲ್ಲಾ ರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿರವರು ಸಂಪಾಜೆ ಲಯನ್ಸ್ ಕ್ಲಬ್ಗೆ ಭೇಟಿ ನೀಡಿದರು. ಸಾಮಾಜಿಕ ಸೇವೆ ಕಾರ್ಯಕ್ರಮದಡಿಯಲ್ಲಿ ಸಂಪಾಜೆ ಅಂಗನವಾಡಿಗೆ ಫೈಬರ್ ಚೇರ್ ವಿತರಣೆ, ಎಂ.ಬಿ.ಫೌAಡೇಶೆನ್ ನಡೆಸುತ್ತಿರುವ ಸಂದೀಪ್ ವಿಶೇಷ ಶಾಲೆಗೆ ೧೦,೦೦೦ ರೂಪಾಯಿಗಳ ಆರ್ಥಿಕ ನೆರವು, ದಬ್ಬಡ್ಕ ಪ್ರಾಥಮಿಕ ಶಾಲೆಗೆ ನೀರಿನ ಟ್ಯಾಂಕ್ ಹಸ್ತಾಂತರ, ಮಡಿಕೇರಿ ವೃದ್ಧಾಶ್ರಮಕ್ಕೆ ೫೦೦೦ ರೂಪಾಯಿಗಳ ಚೆಕ್ ವಿತರಣೆ ಮಾಡಿದರು. ಇತ್ತೀಚೆಗೆ ಡಾಕ್ಟರೇಟ್ ಪದವಿ ಪೂರೈಸಿದÀ ಸಂಪಾಜೆ ಕ್ಲಬ್ನ ಸದಸ್ಯೆ ಡಾ| ಅಮೃತಾ ಅಪ್ಪಣ್ಣರವರನ್ನು ಅಭಿನಂದಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು, ಸಂಪಾಜೆ ಕ್ಲಬ್ನ ಅಧ್ಯಕ್ಷೆ ಟೀನಾ ಚರಣ್ ವಹಿಸಿದ್ದು, ವೇದಿಕೆಯಲ್ಲಿ ಜಿಲ್ಲಾ ಪಿಆರ್ಒ ಜಯರಾಮ ದೇರಪ್ಪಜ್ಜನಮನೆ, ಜಿಲ್ಲಾ ಕಾರ್ಯದರ್ಶಿ ಶಶಿಧರ ಮಾರ್ಲ, ಕ್ಲಬ್ನ ಕಾರ್ಯದರ್ಶಿ ಕಿಶೋರ್ ಕೆ, ಕೋಶಾಧಿಕಾರಿ ಧನಲಕ್ಷಿ÷್ಮ ನವೀನ್, ವಲಯಾಧ್ಯಕ್ಷ ವೆಂಕಪ್ಪ ಕೇನಾಜೆ ಉಪಸ್ಥಿತರಿದ್ದರು.