ಮಡಿಕೇರಿ, ಮಾ. ೧೪: ವಿಶೇಷಚೇತನರ ಸಬಲೀಕರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಸಮರ್ಥನಂ ಸಂಸ್ಥೆ, ಬೆಂಗಳೂರು ಇವರ ವತಿಯಿಂದ ವಿಶೇಷಚೇತನರಿಗೆ ತಾ. ೧೯ ರಂದು ಬೆಳಿಗ್ಗೆ ೯ ಗಂಟೆಗೆ ಮೈಸೂರಿನ ಜೆಎಸ್‌ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವೀರಭದ್ರ ಪಾಟೀಲ್ ೯೪೮೦೮೧೨೧೨೧ (ಠಿಟಚಿಛಿemeಟಿಣs@sಚಿmಚಿಡಿಣhಚಿಟಿಚಿm.oಡಿg) ಹಾಗೂ ಸುಭಾಷ್ ೯೪೪೯೮೬೪೬೯೩ (ಛಿeಟಿಣeಡಿheಚಿಜbಚಿಟಿgಟoಡಿe@sಚಿmಚಿಡಿಣhಚಿಟಿಚಿm.oಡಿg) ಇವರನ್ನು ಸಂಪರ್ಕಿ ಸುವಂತೆ ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ವಿಮಲಾ ತಿಳಿಸಿದ್ದಾರೆ.