ತರಬೇತಿ ಕಾರ್ಯಕ್ರಮ
ಮಡಿಕೇರಿ, ಮಾ. ೧೪: ಭಾರತೀಯ ಕೃಷಿ ಅನುಸಂಧಾನ ಪರಿಷತ್ ಬೀಜ ಯೋಜನೆ ಪ್ರಾಯೋಜಿತ ಪೊನ್ನಂಪೇಟೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಸಂಯುಕ್ತ ಆಶ್ರಯದಲ್ಲಿ ‘ಕೃಷಿ ಬೆಳೆಗಳಲ್ಲಿ ಬೀಜೋತ್ಪಾದನೆ ತಾಂತ್ರಿಕತೆಗಳು’ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಪೊನ್ನಂಪೇಟೆಯ ಸಂಶೋಧನಾ ಕೇಂದ್ರದಲ್ಲಿ ಜರುಗಲಿದೆ.
ತಾ. ೧೬ ರಂದು ಬೆಳಿಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.