ಮಡಿಕೇರಿ, ಮಾ. ೧೪: ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಧರಿಸುವ ಸಂಬAಧ ಪ್ರತಿಭಟನೆಗಳು ನಡೆದಿದ್ದು, ಈ ವಿವಾದವು ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಕುರಿತು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುತ್ತದೆ. ತಾ. ೧೫ರಂದು (ಇಂದು) ನ್ಯಾಯಾಲಯದಿಂದ ಹಿಜಾಬ್ ವಿವಾದದ ಕುರಿತು ತೀರ್ಪು ಪ್ರಕಟವಾಗುವ ಬಗ್ಗೆ ಮಾಹಿತಿ ಇದ್ದು, ನ್ಯಾಯಾಲಯದ ತೀರ್ಪು ಬಂದ ನಂತರ ಪ್ರತಿಭಟನೆ ಅಥವಾ ವಿಜಯೋತ್ಸವ ನಡೆಯಲಿರುವ ಸಾಧ್ಯತೆ ಇರುವುದರಿಂದ ಮುಂಬರುವ ದಿನಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಂಭವವಿರುತ್ತದೆ. ಈ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಜಿಲ್ಲಾದ್ಯಂತ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ
(ಮೊದಲ ಪುಟದಿಂದ) ತಾ. ೧೪ರಂದು ಮಧ್ಯರಾತ್ರಿ ೧೨ ಗಂಟೆಯಿAದ ತಾ. ೧೮ರಂದು ಬೆಳಿಗ್ಗೆ೬ ಗಂಟೆಯವರೆಗೆ ಜಿಲ್ಲೆಯಾ ದ್ಯಂತ (ಪೂರ್ವ ಯೋಜಿತ ಮದುವೆ, ನಾಮಕರಣ, ಗೃಹಪ್ರವೇಶ ಕಾರ್ಯಕ್ರಮ ಹಾಗೂ ಸರ್ಕಾರಿ ಕಾರ್ಯಕ್ರಮ ಹೊರತುಪಡಿಸಿ) ಯಾವುದೇ ಸಭೆ ಸಮಾರಂಭಗಳನ್ನು ನಡೆಸದಂತೆ ಯಾವುದೇ ಪ್ರತಿಭಟನೆ, ಮೆರವಣಿಗೆ, ರ್ಯಾಲಿ, ಜಾಥಾ ನಡೆಸದಂತೆ, ೫ ಮತ್ತು ಅದಕ್ಕಿಂತ ಹೆಚ್ಚು ಜನರು ಗುಂಪು ಸೇರದಂತೆ, ವಿಜಯೋತ್ಸವ ನಡೆಸದಂತೆ, ಪಟಾಕಿ ಸಿಡಿಸದಂತೆ, ಕಪ್ಪು ಬಟ್ಟೆ ಧರಿಸದಂತೆ ಮತ್ತು ಕಪ್ಪು ಬಾವುಟ ಹಿಡಿಯದಂತೆ, ಧ್ವನಿವರ್ಧಕ ಬಳಸಿ ಪ್ರಚೋದನಾತ್ಮಕ ಘೋಷಣೆ ಕೂಗದಂತೆ, ವಾಹನಗಳಲ್ಲಿ ಪ್ರಚೋದನಾತ್ಮಕ ಫಲಕ, ಬಾವುಟಗಳನ್ನು ಅಳವಡಿಸದಂತೆ ಹಾಗೂ ಯಾವುದೇ ವ್ಯಕ್ತಿಯು ಆಯುಧಗಳನ್ನು ಹಿಡಿದುಕೊಂಡು ಸಾರ್ವಜನಿಕವಾಗಿ ತಿರುಗಾಡ ದಂತೆಯೂ, ಭಾಷಣ ನಡೆಸದಂತೆಯೂ ಮುಂಜಾಗ್ರತಾ ಕ್ರಮವಾಗಿ ಕಲಂ ೧೪೪ ಸಿ.ಆರ್.ಪಿ.ಸಿ. ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಬಿ.ಸಿ. ಸತೀಶ ಆದೇಶ ಹೊರಡಿಸಿದ್ದಾರೆ.