ಮಡಿಕೇರಿ, ಮಾ. ೧೩: ಮೊದಲೆಲ್ಲಾ ವಾಹನ ತಪಾಸಣೆ ನೆಪ ಒಡ್ಡಿ ಪೊಲೀಸರು ವಾಹನ ಸವಾರರನ್ನು ಅಡ್ಡಗಟ್ಟುತ್ತಿದ್ದರು. ಜನರ ಗುಂಪು ಸೇರುತ್ತಿದ್ದಾಗ ವಾಗ್ವಾದ, ಚರ್ಚೆಗಳು ನಡೆಯುತ್ತಿದ್ದವು. ಅಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ಗೊತ್ತಾಗುತ್ತಿತ್ತು.

ಇದೀಗ ಆ ವ್ಯವಸ್ಥೆಯನ್ನು ಕಡಿತಗೊಳಿಸಿ ಪೊಲೀಸ್ ವಾಹನದ ಮೇಲೆ ಕ್ಯಾಮರಾ ಅಳವಡಿಸಿ, ವಾಹನದ ವೇಗ, ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಅಳವಡಿಕೆ ಇತ್ಯಾದಿ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಅತೀ ವೇಗ ಎಂದು ಮಾಲೀಕನ ವಿಳಾಸಕ್ಕೆ ನೋಟೀಸ್ ಕಳುಹಿಸಿ ದಂಡ ವಸೂಲಿ ಮಾಡಲಾಗುತ್ತಿದೆ.

ದಂತಿದೆ. ದಿನಕ್ಕೆ ನೂರಾರು ಕೊಡಗು ವಾಹನಗಳ ಮೇಲೆ ಪುಕಾರು ದಾಖಲಾಗುತ್ತಿದ್ದು, ೧೦೦೦ ರೂಪಾಯಿ ದಂಡ ವಿಧಿಸಿ ಅವರ ಮನೆ ವಿಳಾಸಕ್ಕೆ ಮೈಸೂರು ಪೊಲೀಸ್ ಕಮಿಷನರ್ ಕಚೇರಿಯಿಂದ ನೋಟೀಸ್ ಕಳುಹಿಸ ಲಾಗುತ್ತಿದೆ.

ಆನ್‌ಲೈನ್‌ನಲ್ಲಿ ಹಣ ಪಾವತಿಸಬಹುದು ಎಂದಿದ್ದರೂ, ಅದು ಕಾರ್ಯನಿರ್ವಹಿ ಸುತ್ತಿಲ್ಲ. ಸಹಾಯವಾಣಿ ಕೂಡ ಸ್ಪಂದಿಸುತ್ತಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೊಂದವರು ಈ ವಿವರವನ್ನು ಹಂಚಿಕೊAಡಿದ್ದು, ಕೆಲವರು ಕಮಿಷನರ್ ಅವರಿಗೆ ನೇರ ವಾಗಿ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಇಲ್ಲವೆಂದು ಹೇಳಿದ್ದಾರೆ.

ದುರುದ್ದೇಶದಿಂದಲೇ ಕೊಡಗಿ ನವರನ್ನೇ ಗುರಿಯಾಗಿಟ್ಟುಕೊಂಡು ರೂಪಿಸಿದಂತಿರುವ ಈ ನಿಯಮವನ್ನು ಕೂಡಲೇ ರದ್ದು ಮಾಡುವಂತೆ ಹಲವು ಮಂದಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲೇ ಇರುವ ಸಂಸದರೂ ಗಮನಿಸುವಂತೆ ಒತ್ತಾಯಿಸಿದ್ದಾರೆ. ವಾಹನ ಮಾಲೀಕರು ಕಮಿಷನರ್ ಕಚೇರಿ ದೂರವಾಣಿ ಸಂಖ್ಯೆ ೦೮೨೧-೨೪೧೮೫೯೫ ಸಂಖ್ಯೆಯನ್ನು ಸಂಪರ್ಕಿಸಿ ತಮ್ಮ ದುಗುಡವನ್ನು ಹಂಚಿಕೊಳ್ಳಿ.

ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡ ಜಿಲ್ಲೆಯ ಜನತೆಯ ನೋವನ್ನು ಮೈಸೂರಿನ ಕಮಿಷನರ್ ಅವರಿಗೆ ತಿಳಿಸಿ ಸಹಕರಿಸಲಿ.

-ಚಿದ್ದು