ಮಡಿಕೇರಿ, ಮಾ. ೧೩: ಜೂನಿಯರ್ ಮೆನ್ ಇಂಡಿಯಾ ಹಾಕಿ ತಂಡದ ೩೩ ಸದಸ್ಯರ ಕೋರ್‌ಕ್ಯಾಂಪ್‌ನಲ್ಲಿ ಕೊಡಗು ಜಿಲ್ಲೆಯ ಮೂವರು ಯುವ ಆಟಗಾರರು ಸೇರಿದಂತೆ ರಾಜ್ಯದ ಒಟ್ಟು ನಾಲ್ಕುಮಂದಿ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಶಿಬಿರದ ಬಳಿಕ ೩೩ ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಇವರು ೨೦೨೩ರ ಡಿಸೆಂಬರ್ ನಲ್ಲಿ ಮಲೇಷಿಯಾದಲ್ಲಿ ನಡೆಯಲಿರುವ ಜೂನಿಯರ್ ವಿಶ್ವಕಪ್‌ತನಕ ಮುಂದುವರಿ ಯಲಿದ್ದಾರೆ.

(ಮೊದಲ ಪುಟದಿಂದ)

ತAಡದ ಸದಸ್ಯರಾಗಿ ಕೊಡಗಿನವರಾದ ಚಂದುರ ಬಿ. ಪೂವಣ್ಣ, ಮೇಚಂಡ ಚಿರನ್ ಮೇದಪ್ಪ ಹಾಗೂ ಕುಪ್ಪಂಡ ಭವಿನ್ ಕುಶಾಲಪ್ಪ ಆಯ್ಕೆಯಾಗಿದ್ದಾರೆ. ಮತ್ತೋರ್ವ ಆಟಗಾರರಾಗಿ ಹಾಸನದ ಮೋಹಿತ್ ಹೆಚ್.ಎಸ್. ಆಯ್ಕೆಗೊಂಡಿದ್ದಾರೆ. ಜೂನಿಯರ್ ಮೆನ್ ಹಾಕಿ ತಂಡದ ಕೋಚ್ ಆಗಿಯೂ ಕೊಡಗಿನವರಾದ ಬೊಳ್ಳೆಪಂಡ ಜೆ. ಕಾರ್ಯಪ್ಪ ಕಾರ್ಯನಿರ್ವಹಿಸಲಿದ್ದಾರೆ.