ಹಿಜಾಬ್ ವಿವಾದ : ಇಂದು ಅಂತಿಮ ತೀರ್ಪು

ಬೆಂಗಳೂರು, ಮಾ. ೧೪: ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆ ಯಾಗಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಪೀಠ ಆಲಿಸಿದ್ದು, ತಾ. ೧೫ ರಂದು (ಇಂದು) ಕರ್ನಾಟಕ ಹೈಕೋರ್ಟ್ನಲ್ಲಿ ಅಂತಿಮ ತೀರ್ಪು ಪ್ರಕಟವಾಗಲಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ಮೂರು ವಾರಗಳ ಕಾಲ ವಿಚಾರಣೆ ನಡೆದಿತ್ತು. ಅನಂತರ ಅಂತಿಮ ತೀರ್ಪನ್ನು ಕಾಯ್ದಿರಿಸಲಾಗಿತ್ತು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರು ಸಹ ಪೀಠದಲ್ಲಿದ್ದಾರೆ.

ಭಾರತ ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲ ಖರೀದಿಸುವ ಸಾಧ್ಯತೆ

ನವದೆಹಲಿ, ಮಾ. ೧೪: ರಷ್ಯಾ-ಉಕ್ರೇನ್ ಯುದ್ಧದ ನಡುವೆ ಅಮೆರಿಕಾ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧನೆಗಳನ್ನು ವಿಧಿಸುತ್ತಿದ್ದು ಇದರ ನಡುವೆ ಭಾರತ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಮತ್ತು ಇತರ ಸರಕುಗಳನ್ನು ಖರೀಸುವ ಸಾಧತ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾ ರಿಯಾಯಿತಿ ದರದಲ್ಲಿ ತೈಲ ಮತ್ತು ಇತರ ಸರಕುಗಳನ್ನು ಖರೀದಿಸುವ ಅವಕಾಶವನ್ನು ಭಾರತಕ್ಕೆ ನೀಡಿತ್ತು. ಈ ಪ್ರಸ್ತಾಪವನ್ನು ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ ಎಂದರು. ಭಾರತ ತನ್ನ ತೈಲ ಅಗತ್ಯದ ಶೇ. ೮೦ ರಷ್ಟು ಆಮದು ವಿದೇಶಗಳಿಂದ ಮಾಡಿಕೊಳ್ಳುತ್ತಿದ್ದು ಸಾಮಾನ್ಯವಾಗಿ ರಷ್ಯಾದಿಂದ ಶೇ. ೨ ರಿಂದ ೩ ರಷ್ಟನ್ನು ಖರೀದಿಸುತ್ತದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಈ ವರ್ಷ ಇಲ್ಲಿಯವರೆಗೆ ತೈಲ ಬೆಲೆ ಶೇ. ೪೦ ರಷ್ಟು ಏರಿಕೆಯಾಗಿರುವುದರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ದೇಶದಲ್ಲಿ ಬೆಲೆ ಏರಿಕೆ ಬಿಸಿ ಕಡಿಮೆ ಮಾಡಲು ಈ ಅವಕಾಶವನ್ನು ಬಳಸಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾ ತೈಲ ಮತ್ತು ಇತರ ಸರಕುಗಳನ್ನು ಭಾರೀ ರಿಯಾಯಿತಿಯಲ್ಲಿ ನೀಡುತ್ತಿದೆ. ನಾವು ಅದನ್ನು ತೆಗೆದುಕೊಳ್ಳಲು ಸಂತೋಷಪಡುತ್ತೇವೆ. ನಮಗೆ ಟ್ಯಾಂಕರ್, ವಿಮಾ ರಕ್ಷಣೆ ಮತ್ತು ತೈಲ ಮಿಶ್ರಣಗಳಂತಹ ಕೆಲವು ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ನಾವು ಅದನ್ನು ಪಡೆದ ನಂತರ ರಿಯಾಯಿತಿ ಪ್ರಸ್ತಾಪವನ್ನು ತೆಗೆದುಕೊಳ್ಳುತ್ತೇವೆ ಎಂದು ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲ ದೇಶಗಳು ರಷ್ಯಾದ ಮೇಲೆ ವ್ಯಾಪಾರಿ ನಿರ್ಬಂಧಗಳನ್ನು ಹಾಕುತ್ತಿದೆ. ಆದರೆ ಈ ನಿರ್ಬಂಧಗಳು ಭಾರತವು ಇಂಧನವನ್ನು ಆಮದು ಮಾಡಿಕೊಳ್ಳುವುದನ್ನು ತಡೆಯುವುದಿಲ್ಲ ಎಂದು ಭಾರತೀಯ ಅಧಿಕಾರಿ ಹೇಳಿದ್ದಾರೆ.

ಏರ್ ಇಂಡಿಯಾ ಅಧ್ಯಕ್ಷರಾಗಿ ಟಾಟಾ ಸನ್ಸ್ ಮುಖ್ಯಸ್ಥ ನಟರಾಜನ್ ಚಂದ್ರಶೇಖರನ್

ನವದೆಹಲಿ, ಮಾ. ೧೪: ಏರ್ ಇಂಡಿಯಾದ ಅಧ್ಯಕ್ಷರಾಗಿ ನಟರಾಜನ್ ಚಂದ್ರಶೇಖರನ್ ಅವರನ್ನು ಟಾಟಾ ಗ್ರೂಪ್ ಘೋಷಿಸಿದ್ದು, ಅವರ ನೇಮಕಾತಿಯನ್ನು ಮಂಡಳಿಯು ಖಚಿತಪಡಿಸಿದೆ. ಟಾಟಾ ಗ್ರೂಪ್ ಈ ಹಿಂದೆ ಟರ್ಕಿಯ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಎಂದು ಘೋಷಿಸಿತ್ತು, ಆದರೆ ಆ ನೇಮಕಾತಿಯು ಭಾರತದಲ್ಲಿ ಸಾಕಷ್ಟು ವಿವಾದವನ್ನು ಹುಟ್ಟುಹಾಕಿತ್ತು. ಇದರ ಪರಿಣಾಮವಾಗಿ, ಟಾಟಾದ ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಲು ಟರ್ಕಿಯ ಇಲ್ಕರ್ ಐಸಿ ನಿರಾಕರಿಸಿದ್ದರು. ಚಂದ್ರಶೇಖರನ್ ಟಾಟಾ ಸನ್ಸ್ನ ಅಧ್ಯಕ್ಷರಾಗಿದ್ದಾರೆ, ಹಿಡುವಳಿ ಕಂಪನಿ ಮತ್ತು ೧೦೦ಕ್ಕೂ ಹೆಚ್ಚು ಟಾಟಾ ಆಪರೇಟಿಂಗ್ ಕಂಪೆನಿಗಳ ಪ್ರವರ್ತಕರು. ಅವರು ಅಕ್ಟೋಬರ್ ೨೦೧೬ ರಲ್ಲಿ ಟಾಟಾ ಸನ್ಸ್ ಮಂಡಳಿಗೆ ಸೇರಿದರು ಮತ್ತು ಜನವರಿ ೨೦೧೭ ರಲ್ಲಿ ಅಧ್ಯಕ್ಷರಾಗಿ ನೇಮಕಗೊಂಡರು. ಇದಲ್ಲದೇ ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸೇರಿದಂತೆ ಹಲವಾರು ಗ್ರೂಪ್ ಆಪರೇಟಿಂಗ್ ಕಂಪೆನಿಗಳ ಮಂಡಳಿಗಳಿಗೆ ಅಧ್ಯಕ್ಷರಾಗಿದ್ದಾರೆ. ೨೦೦೯ ರಿಂದ ೧೭ ರವರೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಚಂದ್ರಶೇಖರನ್ ಟಾಟಾ ಗ್ರೂಪ್‌ನ ಮುಖ್ಯಸ್ಥರಾದ ಮೊದಲ ಪಾರ್ಸಿಯೇತರ ಮತ್ತು ವೃತ್ತಿಪರ ಕಾರ್ಯನಿರ್ವಾಹಕರಾಗಿದ್ದಾರೆ.

ತಾ. ೧೬ ರಿಂದ ೧೨-೧೪ ವರ್ಷದ ಮಕ್ಕಳಿಗೆ ಕೋವಿಡ್-೧೯ ಲಸಿಕೆ

ನವದೆಹಲಿ, ಮಾ. ೧೪: ಕೇಂದ್ರ ಸರ್ಕಾರ ಈ ವಾರದಿಂದ ೧೨-೧೪ ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್ ಅಭಿವೃದ್ಧಿಪಡಿಸಿರುವ ಕೋವಿಡ್-೧೯ ಲಸಿಕೆ ನೀಡುವ ಅಭಿಯಾನ ಪ್ರಾರಂಭಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಹೇಳಿದ್ದಾರೆ. ತಾ. ೧೬ ರಿಂದ ೧೨-೧೩, ೧೩-೧೪ ವರ್ಷಗಳ ಮಕ್ಕಳಿಗೆ ಲಸಿಕೆ ಅಭಿಯಾನ ಪ್ರಾರಂಭವಾಗಲಿದೆ. ಇದರೊಂದಿಗೆ ೬೦ ವರ್ಷಗಳ ಮೇಲ್ಪಟ್ಟ ಮಂದಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ ಡೋಸ್‌ಗಳನ್ನು ನೀಡಲಾಗುತ್ತದೆ ಎಂದು ಮನ್ ಸುಖ್ ಮಾಂಡವೀಯ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಮಕ್ಕಳು ಸುರಕ್ಷಿತರಾಗಿದ್ದರೆ ದೇಶವೂ ಸುರಕ್ಷಿತವಾಗಿರಲಿದೆ. ತಾ. ೧೬ ರಿಂದ ೧೨-೧೩ ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನವನ್ನು ಘೋಷಿಸಲು ಸಂತಸವಾಗುತ್ತಿದೆ. ಮಕ್ಕಳಿಗೆ ಲಸಿಕೆ ಕೊಡಿಸಲು ಪೋಷಕರಲ್ಲಿ ಮನವಿ ಮಾಡುತ್ತೇನೆ ಹಾಗೂ ೬೦ ವರ್ಷದ ಮೇಲ್ಪಟ್ಟವರು ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ ಪಡೆಯಲು ಮನವಿ ಮಾಡುತ್ತೇನೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಇನ್ನು ಇದೇ ವೇಳೆ ೬೦ ವರ್ಷಕ್ಕೂ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ ತೆಗೆದುಕೊಳ್ಳುವುದಕ್ಕೆ ವಿಧಿಸಲಾಗಿದ್ದ ಬಹುವಿಧದ ಆರೋಗ್ಯ ಸಮಸ್ಯೆಗೆ ಸಂಬAಧಿಸಿದ ಷರತ್ತನ್ನು ತೆಗೆಯಲಾಗಿದೆ.

ಭಾರತ ವಿಶ್ವದ ಅತಿದೊಡ್ಡ ಶಸ್ತಾçಸ್ತç ಆಮದುದಾರ ದೇಶಗಳಲ್ಲಿ ಒಂದು

ನವದೆಹಲಿ, ಮಾ. ೧೪: ಜಾಗತಿಕ ಆಮದಿನಲ್ಲಿ ಶೇ. ೧೧ ಪ್ರತಿಶತ ಹೊಂದಿರುವ ಭಾರತವು ವಿಶ್ವದ ಅತಿದೊಡ್ಡ ಶಸ್ತಾçಸ್ತç ಆಮದುದಾರರಲ್ಲಿ ಒಂದಾಗಿದೆ ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್(ಎಸ್‌ಐಪಿಆರ್‌ಐ) ಹೇಳಿದೆ. ಚೀನಾ ಮತ್ತು ಏಷ್ಯಾ ಮತ್ತು ಓಸೀನಿಯಾದ ಹಲವು ದೇಶಗಳ ನಡುವಿನ ಗಡಿ ಸಮಸ್ಯೆಗಳು ಈ ಆಮದುಗಳಿಗೆ ಮುಖ್ಯ ಕೊಡುಗೆಗಳಾಗಿವೆ. ೨೦೧೨-೧೬ ಮತ್ತು ೨೦೧೭-೨೧ ರ ನಡುವೆ ಭಾರತದ ಶಸ್ತಾçಸ್ತç ಆಮದು ಶೇ. ೨೧ರಷ್ಟು ಕಡಿಮೆಯಾಗಿದೆಯಾದರೂ, ಅದು ಇನ್ನೂ ಜಾಗತಿಕವಾಗಿ ಅತಿದೊಡ್ಡ ಆಮದುದಾರನಾಗಿ ಉಳಿದಿದೆ. ಭಾರತವು ಮುಂದಿನ ಕೆಲವು ವರ್ಷಗಳಲ್ಲಿ ಹಲವಾರು ಪೂರೈಕೆದಾರರಿಂದ ದೊಡ್ಡ ಪ್ರಮಾಣದ ಶಸ್ತಾçಸ್ತç ಆಮದುಗಳನ್ನು ಯೋಜಿಸುವ ಪ್ರಕ್ರಿಯೆಯಲ್ಲಿದೆ ಎಂದು ಶಸ್ತಾçಸ್ತç ವರ್ಗಾವಣೆ ಕಾರ್ಯಕ್ರಮದ ಹಿರಿಯ ಸಂಶೋಧಕ ಸೈಮನ್ ಟಿ. ವೆಝೆಮೆನ್ ಹೇಳಿದರು. ಈ ಉದ್ವಿಗ್ನತೆಗಳು ಈ ದೇಶಗಳು ಅಮೆರಿಕಾದ ಶಸ್ತಾçಸ್ತç ಆಮದು ಮಾಡು ಕೊಳ್ಳುವಲ್ಲಿ ಪ್ರಮುಖ ಅಂಶವಾಗಿದೆ. ಅಮೆರಿಕಾ, ಏಷ್ಯಾ ಮತ್ತು ಓಸಿನಿಯಲ್‌ಗೆ ಅತಿದೊಡ್ಡ ಪೂರೈಕೆದಾರನಾಗಿ ಉಳಿದಿದೆ. ಚೀನಾವನ್ನು ಗುರಿ ಯಾಗಿಟ್ಟುಕೊಂಡು ಶಸ್ತಾçಸ್ತç ರಫ್ತು ಯುಎಸ್ ವಿದೇಶಾಂಗ ನೀತಿಯ ಪ್ರಮುಖ ಅಂಶವಾಗಿದೆ. ಏಷ್ಯಾ ಮತ್ತು ಓಷಿಯಾನಿಯಾ ಪ್ರಮುಖ ಶಸ್ತಾçಸ್ತçಗಳಿಗೆ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ಪ್ರದೇಶವಾಗಿದ್ದು, ೨೦೧೭-೨೧ರಲ್ಲಿ ೪೩ ಪ್ರತಿಶತದಷ್ಟು ಜಾಗತಿಕ ವರ್ಗಾವಣೆಗಳು ನಡೆದಿವೆ. ಭಾರತ, ಆಸ್ಟೆçÃಲಿಯಾ, ಚೀನಾ, ದಕ್ಷಿಣ ಕೊರಿಯಾ, ಪಾಕಿಸ್ತಾನ ಮತ್ತು ಜಪಾನ್ ಆರು ದೇಶಗಳು ಜಾಗತಿಕವಾಗಿ ಅತಿದೊಡ್ಡ ಆಮದುದಾರ ದೇಶಗಳಾಗಿವೆ.

ಚೀನಾ ಸೇನಾ ಸಹಕಾರ ಕೋರಿದ ರಷ್ಯಾ-ಅಮೆರಿಕ ಆರೋಪ

ವಾಷಿಂಗ್ಟನ್, ಮಾ. ೧೪: ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ, ಚೀನಾ ಸೇನೆಯ ಸಹಕಾರವನ್ನು ಕೋರಿದೆ ಎಂದು ಅಮೆರಿಕ ಅಧಿಕಾರಿಗಳು ಆರೋಪಿಸಿದ್ದಾರೆ. ಒಂದು ವೇಳೆ ರಷ್ಯಾ ಮನವಿಗೆ ಸ್ಪಂದಿಸಿ ಚೀನಾ ಸೇನಾ ಸಹಕಾರ ನೀಡಿದಲ್ಲಿ ಚೀನಾಗೆ ಜಾಗತಿಕ ಮಟ್ಟದಲ್ಲಿ ನಿರ್ಬಂಧಗಳನ್ನು ವಿಧಿಸುವುದಾಗಿ ಅಮೆರಿಕ ಎಚ್ಚರಿಸಿದೆ. ಚೀನಾ ರಷ್ಯಾಗೆ ನೆರವು ನೀಡಲು ನಾವು ಬಿಡುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ರಷ್ಯಾ ಪರ ಚೀನಾ ಸುಳ್ಳು ಸುದ್ದಿ ಹರಡುವ ಪ್ರಕ್ರಿಯೆಯಲ್ಲಿ ನಿರತವಾಗಿದೆ ಎಂದು ಬೈಡನ್ ಸರ್ಕಾರ ಆರೋಪಿಸಿದೆ. ರಷ್ಯಾ ಉಕ್ರೇನ್‌ನಲ್ಲಿ ರಾಸಾಯನಿಕ ಮತ್ತು ಜೈವಿಕ ಅಸ್ತçಗಳನ್ನು ಬಳಸಲು ಸಹಾಯವಾಗುವಂತೆ ಚೀನಾ ಸುಳ್ಳು ಸುದ್ದಿ ಗಳನ್ನು ಹರಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ರಷ್ಯಾಗೆ ಅಮೆರಿಕ ಸೇರಿದಂತೆ ಹಲವು ದೇಶಗಳು ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ಅದರಿಂದ ಪಾರಾಗಲು ಚೀನಾ ರಷ್ಯಾಗೆ ಸಹಕರಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ.