ಶನಿವಾರಸಂತೆ, ಮಾ. ೧೪: ಕೊಡ್ಲಿಪೇಟೆಯ ಸಮೀಪದ ಕ್ಯಾತೆ ಗ್ರಾಮದಲ್ಲಿ ಇಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದ ಕೆ.ಎಂ. ವಿಜಯಕುಮಾರ್ ಎಂಬವರಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ನಿವಾಸಿ ಶೇಖರ್ (೫೦) ಅವರು ತಾ. ೫ ರಂದು ತಮಿಳುನಾಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ವಿಜಯ್‌ಕುಮಾರ್ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಠಾಣಾ ಸಹಾಯಕ ಠಾಣಾಧಿಕಾರಿ ಬಿ.ಆರ್. ರಮೇಶ್ ಪ್ರಕರಣ ದಾಖಲಿಸಿದ್ದಾರೆ.