ಮಡಿಕೇರಿ, ಮಾ. ೧೪: ಅಶೋಕಪುರದ ಅಂಬೇಡ್ಕರ್ ಯುವ ವೇದಿಕೆ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ವೆಸ್ಟನ್ ಅಫಿಷಿಯಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವುದರೊಂದಿಗೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡರೆ; ಟಿಂÃ ವೆಸ್ಟನ್ ತಂಡ ದ್ವಿತೀಯ ಸ್ಥಾನದೊಂದಿಗೆ ರೂ. ೨೫ ಸಾವಿರ ನಗದು ಹಾಗೂ ಟ್ರೋಫಿಗೆ ಭಾಜನವಾಯಿತು.

ಸುಮಾರು ಹತ್ತು ಬಲಿಷ್ಟ ತಂಡಗಳು ಪಾಲ್ಗೊಂಡಿದ್ದ ಪಂದ್ಯಾಟ ಕ್ರೀಡಾಭಿಮಾನಿಗಳಿಗೆ ರಸದೌತಣವನ್ನು ಒದಗಿಸಿತು. ಮೊದಲ ಸೆಮಿಫೈನಲ್‌ನಲ್ಲಿ ವೆಸ್ಟನ್ ಅಫಿಷಿಯಲ್ಸ್ ತಂಡ ಕಡಗದಾಳು ಕಾರ್ನರ್ ಫ್ರೆಂಡ್ಸ್ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಎರಡನೇ ಸೆಮಿಫೈನಲ್‌ನಲ್ಲಿ ಟೀಂ ವೆಸ್ಟನ್ ತಂಡ ಧಾರ್ಮಿಕ್ ಸ್ಪೋಟ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ವೆಸ್ಟನ್ ಅಫಿಷಿಯಲ್ಸ್ ಹಾಗೂ ಟೀಂ ವೆಸ್ಟನ್ ತಂಡದ

(ಮೊದಲ ಪುಟದಿಂದ) ನಡುವಿನ ಅಂತಿಮ ಹಣಾಹಣಿಯಲ್ಲಿ ೨೫-೨೩ ಅಂಕಗಳ ಅಂತರದಲ್ಲಿ ವೆಸ್ಟನ್ ಅಫಿಷಿಯಲ್ಸ್ ತಂಡ ಚಾಂಪಿಯನ್ ಪಟ್ಟಕ್ಕೆ ಭಾಜನವಾಯಿತು.

ಕಾರ್ನರ್ ಫ್ರೆಂಡ್ಸ್ ಕಡಗದಾಳು ಮೂರನೇ ಸ್ಥಾನ ಪಡೆದು ರೂ. ೧೫ ಸಾವಿರ ನಗದು, ಟ್ರೋಫಿ, ಧಾರ್ಮಿಕ್ ಸ್ಪೋಟ್ಸ್ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಬೆಸ್ಟ್ ಲಿಬೆರೊ ಪ್ರಶಸ್ತಿಯನ್ನು ವೆಸ್ಟನ್ ಅಫಿಷಿಯಲ್ಸ್ನ ಪ್ರಜ್ವಲ್‌ಗೌಡ, ಬೆಸ್ಟ್ ಟೀಸರ್ ಪ್ರಶಸ್ತಿಯನ್ನು ವೆಸ್ಟನ್ ಅಫಿಷಿಯಲ್ಸ್ನ ಚಪಾತಿ ಪಡೆದುಕೊಂಡರು. ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ವೆಸ್ಟನ್ ಅಫಿಷಿಯಲ್ಸ್ನ ನವೀನ್, ಆಲ್‌ರೌಂಡರ್ ಪ್ರಶಸ್ತಿಯನ್ನು

ಟೀಂ ವೆಸ್ಟನ್‌ನ ಅಯನ್ ಪಡೆದುಕೊಂಡರು. ಎರಡು ದಿನಗಳ ಕಾಲ ನಡೆದ ಪಂದ್ಯಾಟದ ಉದ್ಘಾಟನಾ ಸಮಾರಂಭಕ್ಕೆ ಉದ್ಘಾಟಕರಾಗಿ ಕಾಂಗ್ರೆಸ್ ಯುವ ಮುಖಂಡ ಮಂತರ್‌ಗೌಡ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಸಮಾರೋಪ ಸಮಾರಂಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಬಹುಮಾನ ವಿತರಣೆ ಮಾಡಿದರು. ಅಂಬೇಡ್ಕರ್ ಯುವ ವೇದಿಕೆ ಅಧ್ಯಕ್ಷ ಸುಧೀರ್ ಕುಮಾರ್ ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.