ನಾಪೋಕ್ಲು, ಮಾ. ೧೪: ವಾಹನಗಳ ತಪಾಷಣೆ ಸಮಯದಲ್ಲಿ ವಾಹನಗಳ ದಾಖಲಾತಿ ಸರಿಯಾಗಿಲ್ಲದಿದ್ದರೆ ದಂಡ ಪಾವತಿಸುವದರೊಂದಿಗೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಸದಾಶಿವ ಸೂಚಿಸಿದ್ದಾರೆ.
ಪಟ್ಟಣದಲ್ಲಿ ಸಂಚರಿಸುವ ಎಲ್ಲಾ ಆಟೋ ರಿಕ್ಷಾಗಳ ದಾಖಲಾತಿ ಮತ್ತು ಚಾಲನ ಪರವಾನಿಗೆ ಖಡ್ಡಾಯವಾಗಿರಬೇಕು. ಇದನ್ನು ಸರಿಪಡಿಸಿಕೊಳ್ಳಲು ೧೫ ದಿನಗಳ ಕಾಲಾವಕಾಶ ನೀಡಲಾಗುವದು ಈ ಅವಧಿಯಲ್ಲಿ ದಾಖಲಾತಿ ಇಲ್ಲದವರು ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ ದಂಡ ವಿಧಿಸಲಾಗುವದು ಎಂದು ಎಚ್ಚರಿಕೆ ನೀಡಿದರು. ಎಲ್ಲಾ ದ್ವಿಚಕ್ರ ವಾಹನ ಸವಾರರು ಖಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು ಇಲ್ಲವಾದರೆ ದಂಡ ಕಟ್ಟಬೇಕಾಗುತ್ತದೆ.
ಎಲ್ಲಾ ವಾಹನ ಮಾಲೀಕರು ಮತ್ತು ಚಾಲಕರು ಕಾನೂನು ಪಾಲಿಸುವದರ ಮೂಲಕ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.