ಸೋಮವಾರಪೇಟೆ, ಮಾ. ೧೩: ಇಲ್ಲಿನ ಸರ್ಕಾರಿ ಬಸ್ ನಿಲ್ದಾಣಕ್ಕೆ ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಮಡಿಕೇರಿ ವಿಭಾಗದ ಡಿಪೋ ವ್ಯವಸ್ಥಾಪಕರು ಭೇಟಿ ನೀಡಿ ಅವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು.
ವಿಭಾಗೀಯ ನಿಯಂತ್ರಣಾಧಿಕಾರಿ ಜಯಶಂಕರ್‌ಶೆಟ್ಟಿ ಹಾಗೂ ಡಿಪೋ ವ್ಯವಸ್ಥಾಪಕಿ ಗೀತಾ ಅವರುಗಳು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಬಸ್ ಸಂಚಾರ ವ್ಯವಸ್ಥೆ ಕುರಿತು ಸ್ಥಳೀಯ ಸಂಚಾರಿ ನಿಯಂತ್ರಕರಿAದ ಮಾಹಿತಿ ಪಡೆದರು. ಕೋವಿಡ್ ಸಂದರ್ಭ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಬಸ್ ಸಂಚಾರವನ್ನು ಪುನರ್ ಪ್ರಾರಂಭಿಸಬೇಕೆAದು ಸಾರ್ವಜನಿಕರು ಮನವಿ ಮಾಡಿದರು. ಈಗಾಗಲೇ ಖಾಸಗಿ ಬಸ್‌ಗಳು ಹಲವು ಮಾರ್ಗಗಳನ್ನು ರದ್ದು ಪಡಿಸಿವೆ. ಇದರಿಂದ ಶಾಲಾ ಕಾಲೇಜು ಮಕ್ಕಳು, ಸರಕಾರಿ ಹಾಗೂ ಖಾಸಗಿ ನೌಕರರಿಗೆ, ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು.
ಈ ಹಿಂದೆ ಸೋಮವಾರಪೇಟೆಯಿಂದ ಬೆಳಿಗ್ಗೆ ೬ ಗಂಟೆಗೆ ಮಡಿಕೇರಿಗೆ ತೆರಳುತ್ತಿದ್ದ ಬಸ್ ಸಂಚಾರವನ್ನು ರದ್ದು ಪಡಿಸಿದ ಹಿನ್ನೆಲೆಯಲ್ಲಿ ಮಂಗಳೂರು, ಕೇರಳಕ್ಕೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ಧರ್ಮಸ್ಥಳ ಘಟಕಕ್ಕೆ ಸೇರಿದ ಮಂಗಳೂರು, ಮಡಿಕೇರಿ, ಸೋಮವಾರಪೇಟೆ, ಚನ್ನರಾಯಪಟ್ಟಣ ಮಾರ್ಗವನ್ನು ಪುನರ್ ಪ್ರಾರಂಭಿಸಬೇಕು ಹಾಗೂ ಗ್ರಾಮೀಣ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಬೇಕೆಂದು ಸಾರ್ವಜನಿಕರಾದ ಅಬ್ದುಲ್ ಅಜೀಜ್, ಮುಖೇಶ್, ಹರೀಶ್, ರಾಮಚಂದ್ರ ಮತ್ತಿತರರು ಮನವಿ ಮಾಡಿದರು.