ಕೂಡಿಗೆ, ಮಾ. ೧೩: ಸೈನಿಕ ಶಾಲೆ ವತಿಯಿಂದ ದೈಹಿಕ ಸದೃಢತೆಗಾಗಿ ಓಟ ಕಾರ್ಯಕ್ರಮವನ್ನು ಫಿಟ್ ಇಂಡಿಯಾ ೨.೦ ಮತ್ತು ಸ್ವಚ್ಛತಾ ಅಭಿಯಾನವನ್ನು ಸ್ವಚ್ಛಭಾರತ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಶಾಲೆಯಿಂದ ಹಾರಂಗಿ ಜಲಾಶಯದ ವರೆಗೆ ಹಮ್ಮಿಕೊಳ್ಳಲಾಯಿತು. ಈ ಅಭಿಯಾನವು ಶಾಲೆಯ ಕಿರಿಯ ವಿಭಾಗದ ಎನ್‌ಸಿಸಿ ಘಟಕದ ವತಿಯಿಂದ ಸಾಮಾಜಿಕ ಸೇವಾ ಕಾರ್ಯಕ್ರಮದ ಭಾಗವಾಗಿ ಹಮ್ಮಿಕೊಳ್ಳಲಾಗಿತ್ತು.

ಈ ಅಭಿಯಾನದಲ್ಲಿ ಶಾಲೆಯ ಅಧಿಕಾರಿಗಳು ಮತ್ತು ಎನ್‌ಸಿಸಿ ಘಟಕದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ದೈಹಿಕ ತರಬೇತುದಾರರು ಹಾಗೂ ಶಾಲೆಯ ಸುಮಾರು ೩೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಈ ಅಭಿಯಾನಕ್ಕೆ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಕಣ್ಣನ್ ಅವರು ಚಾಲನೆ ನೀಡಿದರು. ಶಾಲೆಯ ಪ್ರಾಂಶುಪಾಲರನ್ನು ಒಳಗೊಂಡAತೆ, ಎನ್‌ಸಿಸಿ ಘಟಕದ ಮುಖ್ಯಾಧಿ ಕಾರಿಗಳು ಹಾಗೂ ಉಪ ಪ್ರಾಂಶುಪಾಲರು, ಆಡಳಿತಾಧಿ ಕಾರಿಗಳು, ಸಿಬ್ಬಂದಿ ವರ್ಗದವರು ಮತ್ತು ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಸ್ತುತ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆಯ ನಿರ್ದೇಶನದ ‘ಫಿಟ್ ಇಂಡಿಯಾ’ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಹಾಗೆಯೇ ಸ್ವಚ್ಛತಾ ಅಭಿಯಾನವನ್ನು ಕೇಂದ್ರ ಸರ್ಕಾರದ ಕಾರ್ಯಕ್ರಮವಾದ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಕಾರ್ಯಕ್ರಮದ ಪ್ರಯುಕ್ತ ಹಾರಂಗಿ ಜಲಾಶಯದ ಸುತ್ತಲಿನ ಪ್ರದೇಶದ ಸ್ವಚ್ಛತ ಅಭಿಯಾನವನ್ನು ಕೈಗೊಳ್ಳ ಲಾಯಿತು. ಜೊತೆಗೆ ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಯುವ ಜನ ಮತ್ತು ಸಾರ್ವಜನಿಕರಲ್ಲಿ ದೈಹಿಕ ಸದೃಢತೆಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿ ಕೊಳ್ಳಲಾಯಿತು. ಕೊನೆಯಲ್ಲಿ ಹಾರಂಗಿ ಜಲಾಶಯದ ಸುತ್ತಲಿನ ಪ್ರದೇಶದಲ್ಲಿದ್ದ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ವಿಲೇವಾರಿ ಮಾಡ ಲಾಯಿತು. ಕೂಡು ಮಂಗಳೂರಿನ ಗ್ರಾಮ ಪಂಚಾಯಿತಿಯು ವಾಹನ ಸೌಕರ್ಯ ಮತ್ತು ಧ್ವನಿವರ್ಧಕದ ಸಹಕಾರ ನೀಡಿತ್ತು.