ಮಡಿಕೇರಿ, ಮಾ. ೧೩: ಕೊಡಗು ಚಾರ್ಮರ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ತಾ. ೧೮, ೧೯ ಮತ್ತು ೨೦ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ೫+೨ ಫುಟ್ಬಾಲ್ ಪಂದ್ಯಾಟ ನಡೆಯಲಿದೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಪ್ರಮುಖರು ಈ ಬಗ್ಗೆ ಮಾಹಿತಿ ನೀಡಿದರು. ತಾ. ೨೦ ರಂದು ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ. ೫೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೨೫,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಈಗಾಗಲೇ ೩೦ಕ್ಕೂ ಹೆಚ್ಚು ತಂಡಗಳು ನೋಂದಣಿ ಮಾಡಿಕೊಂಡಿವೆ. ಹೆಚ್ಚಿನ ಮಾಹಿತಿಗೆ ೯೪೮೨೫೨೨೨೭೨, ೯೮೪೪೮೩೪೧೬೯ ಸಂಪರ್ಕಿಸಬಹುದಾಗಿದೆ.
ಕೂರ್ಗ್ ಚಾರ್ಮರ್ಸ್ ಫುಟ್ಬಾಲ್ ಕ್ಲಬ್ ನೂತನ ಸಂಘಟನೆಯಾಗಿದ್ದು, ಯುವಕರಿಗೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುತ್ತದೆ ನಮ್ಮ ಸಂಘಟನೆಯು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಷಿಯೇಷನ್ ಅಡಿಯಲ್ಲಿ ನೋಂದಾವಣಿ ಯಾಗಿದೆ. ಈ ಹಿಂದೆ ಹಾಕಿ ಕ್ಲಬ್ ವತಿಯಿಂದ ಕಳೆದ ೧೨ ವರ್ಷಗಳಿಂದ ಹಾಕಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು, ೨೦೧೩ರಲ್ಲಿ ಹಾಕಿ ಕ್ರೀಡಾಕೂಟವನ್ನು ಕೂರ್ಗ್ ಚಾರ್ಮರ್ಸ್ ಹಾಕಿ ಕ್ಲಬ್ ವತಿಯಿಂದ ಹಾಕಿ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ಕೊಕ್ಕಲೆರ ಕುಟ್ಟಪ್ಪ, ಪದಾಧಿಕಾರಿಗಳಾದ ಕೆ.ಬಿ. ದೇವಯ್ಯ, ಸಂಜಯ್ ಶೆಟ್ಟಿ, ಕರುಣ್ ಮಂದಣ್ಣ, ಪೂವಣ್ಣ, ಸುಗುಣ ಉಪಸ್ಥಿತರಿದ್ದರು.