ಮಡಿಕೇರಿ, ಮಾ. ೧೩: ಮಾಜಿ ಒಲಂಪಿಯನ್, ಖ್ಯಾತ ಅಂತರರಾಷ್ಟಿçÃಯ ಹಾಕಿ ಗೋಲ್ಕೀಪರ್ ಆಗಿ ಹೆಸರು ಮಾಡಿರುವ ಕೊಡಗಿನ ಹೆಮ್ಮೆಯ ಕ್ರೀಡಾಪಟು ಡಾ|| ಅಂಜಪರವAಡ ಬಿ. ಸುಬ್ಬಯ್ಯ ಅವರು ಇದೀಗ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹಾಕಿ ಕ್ರೀಡೆಯಿಂದ ನಿವೃತ್ತಿ ಬಳಿಕ, ಏರ್ ಇಂಡಿಯಾದಲ್ಲಿನ ಉದ್ಯೋಗದಲ್ಲಿ ಜನರಲ್ ಮ್ಯಾನೇಜರ್ ಆಗಿ ದೆಹಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಬ್ಬಯ್ಯ ಅವರು ಈ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದು, ಇದೀಗ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿಯ ಚಿಂತನೆಯಾದ ಖೇಲೋ ಇಂಡಿಯಾದ ‘ಹೈ ಪರ್ಫಾರ್ಮೆನ್ಸ್ ಡೈರೆಕ್ಟರ್’ ಆಗಿ ನಿಯುಕ್ತಿ ಗೊಂಡಿದ್ದು, ಮಾರ್ಚ್ ೧೦ ರಿಂದ ಅಧಿಕಾರ ವಹಿಸಿ ಕೊಂಡಿದ್ದಾರೆ. ಬೆಂಗಳೂರಿನ ವಿದ್ಯಾನಗರದಲ್ಲಿರುವ ಜಯಪ್ರಕಾಶ್ ನಾರಾಯಣ್
(ಮೊದಲ ಪುಟದಿಂದ) ಯೂತ್ ಸೆಂಟರ್ನ ವಿಶಾಲ ಕೇಂದ್ರದಲ್ಲಿ ಪ್ರಸ್ತುತ ಇವರು ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಖೇಲೋ ಇಂಡಿಯಾದ ಪ್ರಮುಖ ಉದ್ದೇಶ - ಚಿಂತನೆಗಳಲ್ಲಿ ವಿವಿಧ ಕ್ರೀಡೆ ಬೆಳೆವಣಿಗೆಯೊಂದಿಗೆ ಮುಂದಿನ ಒಲಂಪಿಕ್ಸ್ನAತಹ ಪ್ರಮುಖ ಕ್ರೀಡಾಕೂಟಗಳಿಗೆ ಯುವ ಕ್ರೀಡಾಪಟುಗಳನ್ನು ರೂಪುಗೊಳಿಸುವ ಪ್ರಯತ್ನ ಖೇಲೋ ಇಂಡಿಯಾದ್ದಾಗಿದ್ದು, ಇದು ಪ್ರಧಾನಮಂತ್ರಿಗಳ ಕನಸ್ಸಿನ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಸುಬ್ಬಯ್ಯ ಕರ್ತವ್ಯ ನಿರ್ವಹಿಸಲಿದ್ದು, ಇವರಿಗೆ ವಿಶೇಷವಾಗಿ ಶೂಟಿಂಗ್, ಅಥ್ಲೆಟಿಕ್ಸ್ ಹಾಗೂ ಸ್ವಿಮ್ಮಿಂಗ್ನ ಜವಾಬ್ದಾರಿಯನ್ನು ವಹಿಸಲಾಗಿದೆ.
ಈ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಸುಬ್ಬಯ್ಯ ಅವರು ಖೇಲೋ ಇಂಡಿಯಾ ಕಾರ್ಯಕ್ರಮದಂತೆ ಪ್ರತಿಭಾನ್ವಿತ ಯುವ ಪ್ರತಿಭೆಗಳನ್ನು ಕಂಡುಹಿಡಿದು ಅವರಿಗೆ ಎಲ್ಲಾ ರೀತಿಯ ಸೌಲಭ್ಯದೊಂದಿಗೆ ಉತ್ತಮ ತರಬೇತಿ ಒದಗಿಸಲಾಗುವುದು. ವೃತ್ತಿಪರವಾದ ಎಲ್ಲಾ ರೀತಿಯ ವ್ಯವಸ್ಥೆಗಳು ಇದರಲ್ಲಿ ಒಳಗೊಂಡಿದ್ದು, ೧೪ ರಿಂದ ೧೬ರ ವಯೋಮಿತಿಯ ಯುವಕರನ್ನು ತಯಾರು ಮಾಡುವದು ಉದ್ದೇಶವಾಗಿದೆ. ಪ್ರತಿಭೆ ಇದ್ದು, ಅವಕಾಶವಂಚಿತರಾಗಿರುವವರನ್ನು ಈ ಮೂಲಕ ಗುರುತಿಸಿ ಮುಂದೆ ತರುವ ಪ್ರಯತ್ನ ಮಾಡಲಾಗುವುದು. ೨೦೨೮- ೨೦೩೨ರ ಒಲಂಪಿಕ್ಸ್ ಅನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ಕ್ರೀಡಾಪಟುಗಳನ್ನು ತಯಾರು ಮಾಡುವ ಪ್ರಯತ್ನ ಖೇಲೋ ಇಂಡಿಯಾದ್ದಾಗಿದೆ ಎಂದು ವಿವರವಿತ್ತರು.
ಈ ಅವಕಾಶವನ್ನು ಯುವಪ್ರತಿಭೆಗಳು, ಪೋಷಕರು ಬಳಸಿಕೊಳ್ಳುವಂತೆ ವಿನಂತಿಸಿದ ಅವರು ಈ ವಿಚಾರದಲ್ಲಿ ತಮ್ಮನ್ನು ಸಂಪರ್ಕಿಸಬಹುದೆAದರು. ಸುಬ್ಬಯ್ಯ ಅವರು ಹಾಕಿ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸುವದರೊಂದಿಗೆ ಎರಡು ಬಾರಿಯ ಒಲಂಪಿಯನ್ ಆಗಿದ್ದಾರೆ. ಏರ್ ಇಂಡಿಯಾದಲ್ಲಿ ಸುಮಾರು ೩೨ ವರ್ಷಗಳ ಸೇವೆಯ ಬಳಿಕ ಇದೀಗ ಸ್ವಯಂ ನಿವೃತ್ತಿಯೊಂದಿಗೆ ಈ ಹೊಸ ಜವಾಬ್ದಾರಿಯನ್ನು ಇವರು ವಹಿಸಿಕೊಂಡಿದ್ದಾರೆ. ಪ್ರಸ್ತುತ ಹಾಕಿ ಕರ್ನಾಟಕದ ಗೌರವ ಕಾರ್ಯದರ್ಶಿಯೂ ಇವರಾಗಿದ್ದಾರೆ.