ಮಡಿಕೇರಿ, ಮಾ.೧೩: ಕೊಡಗು ಜಿಲ್ಲಾ ಸರ್ವೋದಯ ಸಮಿತಿಯ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ನಗರದ ಪತ್ರಿಕಾಭವನದಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಾಂಧಿ ಮಂಟಪದ ಪುನರ್ ನಿರ್ಮಾಣದ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆಯಲಾಗಿದೆ, ಯೋಜನೆಗೆ ಸೂಕ್ತ ಸ್ಪಂದನೆ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಗಾಂಧಿ ವಿಚಾರಧಾರೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಬೇಸಿಗೆ ಶಿಬಿರ ನಡೆಸುವ ಕುರಿತು ಚರ್ಚಿಸಲಾಯಿತು.
ಹಿರಿಯ ಸದಸ್ಯ ಟಿ.ಪಿ.ರಮೇಶ್ ಅವರು ಗಾಂಧಿ ವಿಚಾರಧಾರೆಗಳನ್ನು ಮನೆಮನೆಗೆ ಮುಟ್ಟಿಸಲು ಸಕ್ರಿಯವಾಗಿ ಸಮಿತಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಉಪಾಧ್ಯಕ್ಷರುಗಳಾದ ಟಿ.ಎಂ.ಮುದ್ದಯ್ಯ, ಸ್ವರ್ಣಲತ, ಕಾರ್ಯದರ್ಶಿ ಕೆ.ಟಿ.ಬೇಬಿಮ್ಯಾಥ್ಯು, ಲಿಯಾಕತ್ ಆಲಿ, ಪ್ರೇಮಾ ಕೃಷ್ಣಪ್ಪ, ಅಂಬೆಕಲ್ ನವೀನ್, ಸುರಯ್ಯ ಅಬ್ರಾರ್, ಎಸ್.ಪಿ.ವಾಸುದೇವ, ಜಿ.ಸಿ.ರಮೇಶ್, ಯಶೋಧ, ಚುಮ್ಮಿದೇವಯ್ಯ ಹಾಗೂ ಹಿರಿಯರಾದ ಸುಬ್ರಮಣಿ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಿತಿಯ ಕೋಶಾಧಿಕಾರಿ ಕಾನೆಹಿತ್ಲು ಮೊಣ್ಣಪ್ಪ ವಂದಿಸಿದರು.