ಮಡಿಕೇರಿ, ಮಾ. ೧೩: ಭಾರತ ಹಾಕಿ ತಂಡದ ಆಯ್ಕೆ ಸಮಿತಿಯನ್ನು ಹೊಸದಾಗಿ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಈ ಬಾರಿ ಕೊಡಗಿನವರಾದ, ಮಾಜಿ ಒಲಂಪಿಯನ್ ವಿ.ಆರ್. ರಘುನಾಥ್ ಸ್ಥಾನ ಪಡೆದಿದ್ದಾರೆ. ಪುರುಷರ ಹಾಕಿ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಹರ್ಬಿಂದರ್ ಸಿಂಗ್ ಹಾಗೂ ಮಹಿಳಾ ತಂಡದ ಸಮಿತಿ ಅಧ್ಯಕ್ಷರಾಗಿ ಸೈಯ್ಯದ್ ಆಲಿ ಅವರಿದ್ದಾರೆ. ಸದಸ್ಯರುಗಳಾಗಿ ಮೊಹಮದ್ ರಿಯಾಜ್, ದಿಲೀಪ್ ಟರ್ಕಿ, ವಿ.ಆರ್. ರಘುನಾಥ್, ಆರ್.ಪಿ. ಸಿಂಗ್, ರಜನೀಶ್ ಮಿಶ್ರಾ, ಸರ್ದಾರ್ ಸಿಂಗ್, ಜಯದೀಪ್‌ಕೌರ್, ಅಸುಂತಲಾಕ್ರಾ, ಸುನಿಂದು ಕೌರ್ ಅವರುಗಳಿದ್ದಾರೆ.

ಈ ಹಿಂದೆ ಭಾರತ ಹಾಕಿ ತಂಡದ ಆಯ್ಕೆ ಸಮಿತಿಯಲ್ಲಿದ್ದ ಕೊಡಗಿನವರಾದ ಬಿ.ಪಿ. ಗೋವಿಂದ ಅವರು ಇದೀಗ ಮೆಂಬರ್ ಆಫ್ ಹಾಕಿ ಇಂಡಿಯಾ ಹೈಪರ್‌ಫಾರ್ಮೆನ್ಸ್ ಅಂಡ್ ಡೆವಲಪ್‌ಮೆಂಟ್ ಕಮಿಟಿ ಹಾಗೂ ಹಾಕಿ ಇಂಡಿಯಾ ಮಾಸ್ಟರ್ಸ್ ಕಮಿಟಿಯಲ್ಲಿದ್ದಾರೆ. ಮತ್ತೋರ್ವ ಸದಸ್ಯರಾಗಿದ್ದ ಎ.ಬಿ. ಸುಬ್ಬಯ್ಯ ಅವರು ಹಾಕಿ ೫;s ಕಮಿಟಿ ಹಾಗೂ ಹಾಕಿ ಇಂಡಿಯಾ ಮಾಸ್ಟರ್ಸ್ ಕಮಿಟಿಯಲ್ಲಿದ್ದಾರೆ.