ಸುಂಟಿಕೊಪ್ಪ, ಮಾ. ೧೩: ಸುಂಟಿಕೊಪ್ಪದ ಶ್ರೀ ಚಾಮುಂಡಿ ಹಾಗೂ ಮುತ್ತಪ್ಪ ದೇವಸ್ಥಾನ ಗ್ರಾಮ ದೇವತೆಯ ತೃತೀಯ ವರ್ಷದ ವಾರ್ಷಿಕೋತ್ಸವವು ಶುಕ್ರವಾರ ಗ್ರಾಮ ದೇವತೆಯ ಆವರಣದಲ್ಲಿ ನೇರವೇರಿತು.
ಗ್ರಾಮ ದೇವತೆಯ ಬನದಲ್ಲಿ ಬಣ್ಣ ಬಣ್ಣದ ಹೂಗಳು, ತಳಿರು ತೋರಣಗಳಿಂದ ಸಿಂಗರಿಸಲಾಗಿದ್ದ ಗ್ರಾಮ ದೇವತೆಗೆ ಬೆಳಿಗ್ಗೆ ೬.೪೦ ರಿಂದ ೭.೩೦ ರವರೆಗೆ ಸ್ಥಳ ಶುದ್ಧಿ ೮.೩೦ಕ್ಕೆ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ನಂತರ ೯.೪೦ ರಿಂದ ೧೦.೩೦ ರವರೆಗೆ ಹರಕೆ ಅರ್ಪಣೆ ಭಕ್ತಾದಿಗಳು ನೆರವೇರಿಸಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳ ಸಮುಖದಲ್ಲಿ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ಪ್ರಸಾದ ಹಾಗೂ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
ಈ ಸಂದರ್ಭ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ವೈ.ಎಂ. ಕರುಂಬಯ್ಯ, ಎಸ್.ಜಿ. ಶ್ರೀನಿವಾಸ್, ಕೆ.ಪಿ. ಜಗನ್ನಾಥ್, ಡಾ. ಶಶಿಕಾಂತ ರೈ, ಪಿ.ಕೆ. ಜಗದೀಶ್ ರೈ, ರಮೇಶ್ ಪಿಳ್ಳೆ, ಎ. ಶ್ರೀಧರ್ ಕುಮಾರ್, ದೀನು ದೇವಯ್ಯ, ಸುರೇಶ್ಗೋಪಿ, ಪಿ. ಲೋಕೇಶ್, ಎ. ಶ್ರೀಧರನ್, ಬಿ.ಎಸ್. ಅಶೋಕ್ ಶೇಟ್, ಬಿ.ಡಿ. ರಾಜು ರೈ, ರವಿ, ಶಶಿಕಾಂತ್ ಮತ್ತಿತರರು ಇದ್ದರು.