ಮುಳ್ಳೂರು, ಮಾ. ೧೩ : ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುವುದರ ಜೊತೆಯಲ್ಲಿ ದೇಹದಲ್ಲಿ ಮತ್ತಷ್ಟು ರಕ್ತವು ಶೇಖರಣೆಯಾಗುತ್ತದೆ ಎಂದು ಬೆಂಗಳೂರು ರಾಷ್ಟೊçÃತ್ಥಾನ ರಕ್ತ ಕೇಂದ್ರದ ಸಂಚಾಲಕ ಡಾ. ಎನ್. ಈಶ್ವರ್ ಅಭಿಪ್ರಾಯಪಟ್ಟರು. ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ಲಯನ್ಸ್ ಕ್ಲಬ್ ಆಫ್ ಹುಣಸೂರು ಕಾವೇರಿ ಸಂಭ್ರಮ ಶನಿವಾರಸಂತೆ ಮತ್ತು ರಾಷ್ಟೊçÃತ್ಥಾನ ರಕ್ತಕೇಂದ್ರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಾಮೂಹಿಕ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವ್ಯಕ್ತಿಯ ರಕ್ತದಲ್ಲಿರುವ ಕಾಯಿಲೆಗಳಿಗೆ ರಕ್ತ ನೀಡುವುದರಿಂದ ವ್ಯಕ್ತಿಯ ಆರೋಗ್ಯವು ಉತ್ತಮಗೊಳ್ಳುತ್ತದೆ ರಕ್ತದಾನ ಮಾಡುವುದರಿಂದ ದೇಹದಲ್ಲಿ ರಕ್ತ ಮತ್ತಷ್ಟು ಸಂಗ್ರಹವಾಗುತ್ತದೆ ರಕ್ತದಾನ ಶಿಬಿರದಲ್ಲಿ ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ಪರೀಕ್ಷಿಸಿ ರಕ್ತದ ಅಗತ್ಯ ಇದ್ದ ಸಂದರ್ಭ ರೋಗಿಗಳಿಗೆ ನೀಡುವ ಮೂಲಕ ರೋಗಿಯ ಜೀವ ಉಳಿಸಿದಂತಾಗುತ್ತದೆ ಎಂದರು.
ಶನಿವಾರಸಂತೆ ಲಯನ್ಸ್ ಕ್ಲಬ್ ಕಾವೇರಿ ಸಂಭ್ರಮ ಅಧ್ಯಕ್ಷ ಜಿ. ನಾರಾಯಣಸ್ವಾಮಿ ಮಾತನಾಡಿ, ರಕ್ತದಾನ ಮಹತ್ವದ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಯುವ ಸಮೂಹ ಸೇರಿದಂತೆ ಆರೋಗ್ಯವಂತರಾದ ಪ್ರತಿಯೊಬ್ಬರು ರಕ್ತದಾನ ಮಾಡುವ ಕಾರ್ಯದಲ್ಲಿ ಮುಂದಾಗಬೇಕು. ಲಯನ್ಸ್ ಕ್ಲಬ್ ಸಮಾಜ ಕಾರ್ಯದ ಜೊತೆಯಲ್ಲಿ ಆರೋಗ್ಯ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಕೆ. ಅಪ್ಪಸ್ವಾಮಿ ಮಾತನಾಡಿದರು. ರಕ್ತದಾನ ಶಿಬಿರದ ಮಹತ್ವ ಕುರಿತು ಉಪನ್ಯಾಸಕ ಚಂದ್ರಕಾAತ್ ಪ್ರಾಸ್ತಾವಿಕವಾಗಿ ಮಾತನಾಡಿದರು ಕಾರ್ಯಕ್ರಮದಲ್ಲಿ ಶನಿವಾರಸಂತೆ ಲಯನ್ಸ್ ಕ್ಲಬ್ ಖಜಾಂಜಿ ಬಿ.ಕೆ.ಚಿಣ್ಣಪ್ಪ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಇ.ಎಂ.ದಯಾನAದ್, ಉಪನ್ಯಾಸಕ ಎಂ.ಎನ್.ಹರೀಶ್, ಲಯನ್ಸ್ ಕ್ಲಬ್ ಸದಸ್ಯರು, ವಿದ್ಯಾಸಂಸ್ಥೆ ನಿರ್ದೆಶಕರು, ರಾಷ್ಟೊçÃತ್ಥಾನ ರಕ್ತಕೇಂದ್ರದ ಸಿಬ್ಬಂದಿ ಹಾಜರಿದ್ದರು. ಶಿಬಿರದಲ್ಲಿ ನೂರಾರು ಜನರು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿದರು.