ಭಾರತದ ರಾಯಭಾರ ಕಚೇರಿ ಸ್ಥಳಾಂತರ

ನವದೆಹಲಿ, ಮಾ. ೧೩: ಯುದ್ಧಪೀಡಿತ ಉಕ್ರೇನ್ ದೇಶದಲ್ಲಿ ಭದ್ರತಾ ಪರಿಸ್ಥಿತಿ ತೀವ್ರ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಉಕ್ರೇನ್ ರಾಜಧಾನಿ ಕೀವ್ ಮತ್ತು ಇತರ ಪ್ರಮುಖ ನಗರಗಳ ಮೇಲೆ ರಷ್ಯಾದ ದಾಳಿ ತೀವ್ರವಾದ ನಂತರ ಭಾರತ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಉಕ್ರೇನ್ ದೇಶದ ಪಶ್ಚಿಮ ಭಾಗಗಳಲ್ಲಿ ರಷ್ಯಾದ ದಾಳಿ ತೀವ್ರ ವಾಗಿರುವ ಕಾರಣ ಮತ್ತು ಅಲ್ಲಿನ ಭದ್ರತಾ ಪರಿಸ್ಥಿತಿ ತೀವ್ರ ಹದಗೆಡುತ್ತಿ ರುವುದರಿಂದ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಮುಂದಿನ ಬೆಳವಣಿಗೆಗಳ ಪರಿಸ್ಥಿತಿಯನ್ನು ಮರು ಮೌಲ್ಯಮಾಪನ ಮಾಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಫೋನ್ ಕದ್ದಾಲಿಕೆ ಆರೋಪ-ದೇವೇಂದ್ರ ಫಡ್ನವಿಸ್ ವಿಚಾರಣೆ

ಮುಂಬೈ, ಮಾ. ೧೩: ಫೋನ್ ಕದ್ದಾಲಿಕೆ ಆರೋಪದ ಕೇಸ್‌ಗೆ ಸಂಬAಧಿಸಿದAತೆ ಹಿರಿಯ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಅವರ ಮನೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಅವರ ಹೇಳಿಕೆಯನ್ನು ಬಿಕೆಸಿ ಸೈಬರ್ ಪೊಲೀಸರ ತಂಡ ದಾಖಲಿಸಿಕೊಂಡಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದಾಗ ರಾಜಕೀಯ ಮುಖಂಡರ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆರೋಪದ ಬಗ್ಗೆ ಮಹಾರಾಷ್ಟç ಡಿಜಿಪಿಗೆ ಉದ್ದೇಶಪೂರ್ವಕವಾಗಿ ಆಕೆ ಪತ್ರ ಬರೆದಿದ್ದನ್ನು ಮಹಾರಾಷ್ಟç ಮಾಜಿ ಮುಖ್ಯಮಂತ್ರಿ ಫಡ್ನವಿಸ್ ಉಲ್ಲೇಖಿಸಿದ್ದಾರೆ. ಈ ಪತ್ರದಲ್ಲಿ ತಡೆಹಿಡಿಯಲಾದ ದೂರವಾಣಿ ಕರೆಗಳ ಮಾಹಿತಿಯಿತ್ತು. ಇದು ಅನುಮತಿ ಇಲ್ಲದೆ ಶುಕ್ಲಾ ಫೋನ್ ಕದ್ದಾಲಿಕೆ ಆರೋಪಕ್ಕೊಳಗಾಗಿ ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರಕ್ಕೆ ನಾಯಕರ ನಡುವಿನ ವಾಕ್ ಪ್ರಹಾರಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಫೋನ್ ಕದ್ದಾಲಿಕೆ ಮತ್ತು ವಿಶ್ವಾಸಾರ್ಹ ಮಾಹಿತಿ ಸೋರಿಕೆ ಆರೋಪ ದಿಂದಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಳೆದ ವರ್ಷ ರಾಜ್ಯ ಗುಪ್ತಚರ ಇಲಾಖೆ ಬಿಕೆಸಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಡಾಕ್ಟರೇಟ್

ಮೈಸೂರು, ಮಾ. ೧೩: ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಘೋಷಿಸಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಳೆದ ಅಕ್ಟೋಬರ್ ೨೯ರಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು, ಇದೀಗ ಮೈಸೂರು ವಿಶ್ವವಿದ್ಯಾಲಯ ಪುನೀತ್ ಅವರ ಸಿನಿಮಾ ಮತ್ತು ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತಿದ್ದು ತಾ. ೨೨ ರಂದು ನಡೆಯಲಿರುವ ವಿಶ್ವವಿದ್ಯಾಲಯದ ೧೦೨ನೇ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ವಿವಿ ಕುಲಪತಿ ಘೋಷಿಸಿದ್ದಾರೆ.

ಮೆಟ್ರೋ ಕಾಮಗಾರಿ ಬಳಿ ಅಗ್ನಿ ಅವಘಡ

ಬೆಂಗಳೂರು, ಮಾ. ೧೩: ಶಿವಾಜಿನಗರ ಬಳಿಯ ಬಂಬೂ ಬಜಾರ್‌ನಲ್ಲಿ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಮೆಟ್ರೊ ಕಾಮಗಾರಿಯಲ್ಲಿದ್ದ ಕಟ್ಟಡದ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ನಡೆದಿದೆ. ಅಗ್ನಿ ಅವಘಡದಿಂದಾಗಿ ಸ್ಥಳದಲ್ಲಿ ಭಾರೀ ಪ್ರಮಾಣದ ಹೊಗೆ ಆವರಿಸಿದ್ದು, ಇದರ ಪರಿಣಾಮ ನಿವಾಸಿಗಳು ಆತಂಕಗೊAಡು, ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಬೆಂಕಿ ನಂದಿಸಿದರು. ಸ್ಥಳದಲ್ಲಿ ಪ್ಲೈವುಡ್, ಪ್ಲಾಸ್ಟಿಕ್ ಹಾಗೂ ಗಮ್ ಇದ್ದ ಪರಿಣಾಮ ಬೆಂಕಿ ಹೊತ್ತಿ ಉರಿದಿತ್ತು. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶಿವಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ತಜ್ಞರೂ ಭೇಟಿ ನೀಡಿದ್ದು ಪರಿಶೀಲನೆ ಆರಂಭಿಸಿದ್ದಾರೆ.

ಖೇಲೋ ಇಂಡಿಯಾ-ಮಲ್ಲಗAಬ, ಯೋಗ ಸೇರ್ಪಡೆ

ಬೆಂಗಳೂರು, ಮಾ. ೧೩: ಕರ್ನಾಟಕದಲ್ಲಿ ಏಪ್ರಿಲ್ ೨೪ ರಿಂದ ಮೇ ೩ ರವರೆಗೆ ಆಯೋಜಿಸಲಾಗಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಲ್ಲಗಂಬ ಮತ್ತು ಯೋಗವನ್ನು ಸೇರಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಅವರು ಮಾಹಿತಿ ನೀಡಿದ್ದಾರೆ. ಈ ಕ್ರೀಡಾಕೂಟವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದು, ದೇಶದಾದ್ಯಂತ ಸುಮಾರು ೮,೦೦೦ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ೨೦೨೦ ರಲ್ಲಿ ಒಡಿಶಾದಲ್ಲಿ ನಡೆದ ಕ್ರೀಡಾಕೂಟಕ್ಕೆ ಹೋಲಿಸಿದರೆ, ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳ ಸಂಖ್ಯೆ ದ್ವಿಗುಣವಾಗಿದೆ. ಈ ವರ್ಷದ ಕ್ರೀಡಾಕೂಟದ ಲಾಂಛನವನ್ನು ತಾ. ೨೭ ರಂದು ಬೆಂಗಳೂರಿನಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಬಿಡುಗಡೆ ಮಾಡಲಿದ್ದಾರೆ. ಕ್ರೀಡಾಕೂಟದಲ್ಲಿ ಈ ಬಾರಿ ಮಲ್ಲಗಂಬ, ಯೋಗ ಸೇರಿದಂತೆ ೧೭ ರಿಂದ ೨೩ಕ್ಕೆ ಆಟೋಟಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಹುಲಿ ಸಂರಕ್ಷಿತಾರಣ್ಯ ಪ್ರಸ್ತಾವನೆ ಮುಂದೂಡಿಕೆ

ಬೆAಗಳೂರು, ಮಾ. ೧೩: ಮಲೆ ಮಹದೇಶ್ವರ ಅರಣ್ಯವನ್ನು ಹುಲಿ ಸಂರಕ್ಷಿತಾರಣ್ಯ ಪ್ರದೇಶವಾಗಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಮುಂದೂಡಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನಿAದ ಸುಮಾರು ೨೦೦ ಕಿ.ಮೀ. ದೂರದಲ್ಲಿರುವ ಮಲೆ ಮಹದೇಶ್ವರ ಅರಣ್ಯದಲ್ಲಿ ಹುಲಿ ಸಂರಕ್ಷಿತ ಪ್ರದೇಶವನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಯನ್ನು ಕರ್ನಾಟಕ ಸಚಿವ ಸಂಪುಟ ಮುಂದಿನ ದಿನಾಂಕಕ್ಕೆ ಮುಂದೂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಧಿಕಾರಿಗಳ ತಂಡವು ಸಂಬAಧಿತ ಪಾಲುದಾರರೊಂದಿಗೆ ಮಾತನಾಡಿ, ಸಾಧಕ-ಬಾಧಕಗಳನ್ನು ಚರ್ಚಿಸಲು ಮತ್ತು ಅವರು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಕೇಂದ್ರ ಸರ್ಕಾರದ ನಿಯಮಗಳನ್ನು ಪರಿಶೀಲಿಸುತ್ತಾರೆ ಎನ್ನಲಾಗಿದೆ.

ಯುದ್ಧದಲ್ಲಿ ಪತ್ರಕರ್ತ ಸಾವು

ಕೈವ್, ಮಾ. ೧೩: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ೧೮ನೇ ದಿನವಾದ ಭಾನುವಾರವೂ ಮುಂದುವರಿದಿದೆ. ಇದರ ಹೊರತಾಗಿಯೂ ಉಭಯ ದೇಶಗಳ ಮಧ್ಯೆ ಇದುವರೆಗೆ ಕದನ ವಿರಾಮದ ಯಾವುದೇ ಲಕ್ಷಣ ಕಂಡುಬAದಿಲ್ಲ. ಒಂದೆಡೆ ಉಕ್ರೇನ್ ನಗರಗಳ ಮೇಲೆ ರಷ್ಯಾ ದಾಳಿ ನಡೆಸುತ್ತಿದ್ದರೆ, ಇನ್ನೊಂದೆಡೆ ಉಕ್ರೇನ್‌ನಿಂದ ಪ್ರಬಲ ಪ್ರತಿರೋಧ ವ್ಯಕ್ತವಾಗುತ್ತಿದೆ. ಇದುವರೆಗೆ ೧೩,೦೦೦ಕ್ಕೂ ಹೆಚ್ಚು ರಷ್ಯಾದ ಸೈನಿಕರನ್ನು ಕೊಂದಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ಈ ಮಧ್ಯೆ ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತರೊಬ್ಬರು ಉಕ್ರೇನ್‌ನ ರಾಜಧಾನಿ ಕೈವ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಇರ್ಪಿನ್ ಬಳಿ ರಷ್ಯಾದ ಪಡೆಗಳು ಕಾರಿನ ಮೇಲೆ ಗುಂಡು ಹಾರಿಸಿದಾಗ ವೀಡಿಯೋ ಪತ್ರಕರ್ತ ಬ್ರೆಂಡ್ ರೆನಾಡ್ (೫೧) ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅವರೊಂದಿಗಿದ್ದ ಮತ್ತೋರ್ವ ಪತ್ರಕರ್ತ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಚಿಲಿ ದೇಶದ ನೂತನ ಅಧ್ಯಕ್ಷರಾಗಿ ಗೇಬ್ರಿಯಲ್

ಸ್ಯಾಂಟಿಯಾಗೊ, ಮಾ. ೧೩: ಚಿಲಿ ದೇಶದ ನೂತನ ಅಧ್ಯಕ್ಷರಾಗಿ ೩೬ ವರ್ಷದ ಗೇಬ್ರಿಯಲ್ ಬೋರಿಕ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಚಿಲಿಯ ನೂತನ ಅಧ್ಯಕ್ಷರಾಗಿ ಎಡಪಂಥೀಯ ವಿಚಾರವಾದಿ ಗೇಬ್ರಿಯಲ್ ಬೊರಿಕ್ ಪ್ರಮಾಣ ವಚನ ಸ್ವೀಕರಿಸಿದ್ದು, ದೇಶದಲ್ಲಿನ ಆರ್ಥಿಕ ಅಸಮಾನತೆಗಳ ಬಗ್ಗೆ ರಾಷ್ಟçವ್ಯಾಪಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ೩೬ ವರ್ಷದ ಬೋರಿಕ್ ಆಗಮನದೊಂದಿಗೆ ಜನರಲ್ಲಿ ಹೊಸ ಭರವಸೆ ಮೂಡಿದೆ. ಹದಿನೇಳು ವರ್ಷಗಳ ಕಾಲ ದೇಶವನ್ನು ಆಳಿದ ಮಿಲಿಟರಿ ಸರ್ವಾಧಿಕಾರದಿಂದ ರಕ್ತಸಿಕ್ತ ಚಿಲಿ ಅಂತ್ಯಗೊAಡು ನಾಲ್ಕು ವರ್ಷಗಳು ಕಳೆದಿವೆ. ಈಗ ಪ್ರಜಾಪ್ರಭುತ್ವವನ್ನು ಪುನಃಸ್ಥಾಪನೆಯಾಗಿದ್ದೂ. ಬೋರಿಕ್ ತನ್ನ ಕ್ಯಾಬಿನೆಟ್‌ಗೆ ೧೪ ಮಹಿಳೆಯರನ್ನು ಸೇರ್ಪಡೆಮಾಡಿದ್ದು ತನ್ನದು “ಸ್ತಿçÃವಾದಿ ಕ್ಯಾಬಿನೆಟ್” ಎಂದು ಹೇಳಿದ್ದಾರೆ. ಜೊತೆಗೆ ಇನ್ನೂ ೧೦ ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.